ಸವದತ್ತಿಯ ಎಪಿಎಂಸಿ ವೃತ್ತದಲ್ಲಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಜರುಗಿತು. ಮುಖಂಡರಾದ ರುದ್ರಣ್ಣ ಚಂದರಗಿ, ಈರಣ್ಣ ಚಂದರಗಿ, ರತ್ನಾ ಮಾಮನಿ, ವಿರೂಪಾಕ್ಷ ಮಾಮನಿ, ವಿನಯಕುಮಾರ ದೇಸಾಯಿ, ಸಂಜೀವಕುಮಾರ ನವಲಗುಂದ, ಬಸವರಾಜ ಪಟ್ಟಣಶೆಟ್ಟಿ, ಅಜಿತಕುಮಾರ ದೇಸಾಯಿ ಇತರರಿದ್ದರು. 
ಜಿಲ್ಲೆ

ಸೋಲಿನ ಭೀತಿಯಲ್ಲಿ ಸಿದ್ದರಾಮಯ್ಯ

ಸವದತ್ತಿ: ಜಾತಿ ವಿಷ ಬೀಜ ಬಿತ್ತಿ ಗೆಲ್ಲುವ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ಸ್ವಂತ ಕ್ಷೇತ್ರ ಬಿಟ್ಟು ಬೇರೆಡೆ ಸ್ಪರ್ಧಿಸಲು ಸಿದ್ದರಾಮಯ್ಯಗೆ ಸೋಲುವ ಭೀತಿ ಕಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವ್ಯಂಗ್ಯವಾಡಿದರು.

ಇಲ್ಲಿನ ಎಪಿಎಂಸಿ ವೃತ್ತದಲ್ಲಿ ಶನಿವಾರ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ನಿಧನರಾದಾಗ ದೆಹಲಿಯಲ್ಲಿ ಸಂಸ್ಕಾರ ನಡೆಸದೆ ಮುಂಬೈನಲ್ಲಿ ನೆರವೇರಿಸಿದರು. ಡಾ. ಅಂಬೇಡ್ಕರ್ ವಿರೋಧಿ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಬೇಕಿದೆ. ಕರ್ನಾಟಕ ಮಾತ್ರವಲ್ಲದೆ ದೇಶವನ್ನೇ ಕಾಂಗ್ರೆಸ್ ಮುಕ್ತವಾಗಿಸಲು ನಿಮ್ಮೆಲ್ಲರ ಬೆಂಬಲ ಅಗತ್ಯವಿದೆ ಎಂದರು.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, 55 ವರ್ಷ ಸುಳ್ಳು ಹೇಳಿ ಆಡಳಿತ ನಡೆಸಿದ ಕಾಂಗ್ರೆಸ್‌ನ ಒಂದು ಆಶ್ವಾಸನೆ ಜಾರಿಗೆ ಬಂದಿಲ್ಲ. ಗ್ಯಾರಂಟಿ ಕಾರ್ಡ್ ವಿತರಣೆ ಅಲ್ಲ, ಸಿದ್ದು ಮನೆಗೆ ಹೋಗುವುದು ಗ್ಯಾರಂಟಿ ಎಂದರು.

ಸಚಿವ ಭೈರತಿ ಬಸವರಾಜ ಮಾತನಾಡಿದರು. ಸಚಿವರಾದ ಸಿ.ಸಿ.ಪಾಟೀಲ ಹಾಗೂ ಮುರುಗೇಶ ನಿರಾಣಿ, ಸಂಸದೆ ಮಂಗಲ ಅಂಗಡಿ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಮುಖಂಡರಾದ ರುದ್ರಣ್ಣ ಚಂದರಗಿ, ಈರಣ್ಣ ಚಂದರಗಿ, ರತ್ನಾ ಮಾಮನಿ, ವಿರೂಪಾಕ್ಷ ಮಾಮನಿ, ವಿನಯಕುಮಾರ ದೇಸಾಯಿ, ಸಂಜೀವಕುಮಾರ ನವಲಗುಂದ, ಬಸವರಾಜ ಪಟ್ಟಣಶೆಟ್ಟಿ, ಅಜಿತಕುಮಾರ ದೇಸಾಯಿ ಇತರರಿದ್ದರು.