ಯಳಂದೂರು: ಸಂಸದ ಸುನೀಲ್ ಬೋಸ್ ಹುಟ್ಟುಹಬ್ಬದ ನಿಮಿತ್ತ ತಾಲೂಕಿನ ಬಿಳಿಗಿರಿರಂಗನಬೆಟ್ಟದ ಬುಡಕಟ್ಟು ಜನಾಂಗವಾದ 700 ಮಂದಿ ಸೋಲಿಗರಿಗೆ ಕಾಂಗ್ರೆಸ್ ಪದವೀಧರ ವಿಭಾಗದ ಜಿಲ್ಲಾಧ್ಯಕ್ಷ ಸಿ.ವೆಂಕಟೇಶ್ ಅವರು ಕಂಬಳಿ ವಿತರಿಸಿದರು.
ಬಳಿಕ ಮಾತನಾಡಿ, ಸಂಸದರಾದ ಸುನೀಲ್ ಬೋಸ್ ಅವರ 44ನೇ ಹುಟ್ಟುಹಬ್ಬದ ನಿಮಿತ್ತ ಬೆಟ್ಟದ ಪೋಡಿನ ಬುಡಕಟ್ಟು ಸಮುದಾಯದ ಸೋಲಿಗರಿಗೆ ಕಂಬಳಿಗಳನ್ನು ವಿತರಣೆ ಮಾಡಲಾಗುತ್ತಿದೆ. ಇಲ್ಲಿ ಈಗ ಮಳೆಗಾಲವಾಗಿದೆ. ಚಳಿಯೂ ಹೆಚ್ಚಾಗಿರುತ್ತದೆ. ಹಾಗಾಗಿ ಇವರಿಗೆ ಕಂಬಳಿಗಳನ್ನು ವಿತರಣೆ ಮಾಡಲಾಗುತ್ತಿದೆ. ಅಲ್ಲದೆ ಬಿಳಿಗಿರಿರಂಗನಾಥಸ್ವಾಮಿ ದೇಗುಲದಲ್ಲಿ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಸುನೀಲ್ ಬೋಸ್ ಜನಾನುರಾಗಿ ಸಂಸದ. ಕ್ಷೇತ್ರದ ತುಂಬ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ರೂಪಿಸಲು ಇವರು ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇವರ ಅವಧಿಯಲ್ಲಿ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಕಾಣುವ ಎಲ್ಲ ಸಾಧ್ಯತೆಗಳಿವೆ. ಈ ಹಿಂದೆಯೂ ಸಂಸದರಾಗಿದ್ದ ಧ್ರುವನಾರಾಯಣ ಅವರ ಹುಟ್ಟುಹಬ್ಬಕ್ಕೂ ಇದೆ ರೀತಿ ಸೋಲಿಗರಿಗೆ ನೆರವಾಗುವ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಇದು ಈಗಲೂ ಮುಂದುವರೆದಿದೆ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷೆ ಕೇತಮ್ಮ ಮಾತನಾಡಿದರು.ಗ್ರಾಪಂ ಉಪಾಧ್ಯಕ್ಷೆ ಕಮಲಮ್ಮ ಸದಸ್ಯೆ ಮಾದಮ್ಮ, ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಗ್ರಾಪಂ ಸದಸ್ಯ ಕೆಸ್ತೂರು ಗುರುಲಿಂಗ, ಮಲ್ಲೇಶ್, ಗೋವಿಂದರಾಜು, ಪರಮೇಶ್, ಶಿವಮಲ್ಲು, ಕೆ.ಮಹದೇವ, ಮರಿಯನಕೇತೇಗೌಡ, ಕೇತೇಗೌಡ ಇದ್ದರು.