ಜಿಲ್ಲೆ

ಸೋಯಾಬಿನ್ ಕಾಳಿನ ಬಣವೆ ಬೆಂಕಿಗಾಹುತಿ

ಧಾರವಾಡ: ಆಕಸ್ಮಿಕ ಬೆಂಕಿ ತಗುಲಿ ಜಮೀನಿನಲ್ಲಿ ಸಂಗ್ರಹಿಸಿದ್ದ ಸೋಯಾಬಿನ್ ಕಾಳಿನ ಬಣವೆ ಬೆಂಕಿಗಾಹುತಿಯಾದ ಘಟನೆ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ರೈತ ಬಸಯ್ಯ ತಿರಕಯ್ಯ ದೊಡ್ಡಮನಿ ಎಂಬುವರ ಬಣವೆ ಸುಟ್ಟು ಹೋಗಿದೆ. ಮುಂಗಾರು ಹಂಗಾಮಿನಲ್ಲಿ ಸೋಯಾಬಿನ್ ಬೆಳೆದಿದ್ದ ರೈತ ಬಸಯ್ಯ ಜಮೀನಿನಲ್ಲಿ ಸಂಗ್ರಹಿಸಿದ್ದರು. ಇನ್ನಷ್ಟೇ ಕಣ ಮಾಡಿ ಒಕ್ಕಣೆ ಮಾಡಬೇಕಿತ್ತು. ಏಕಾಏಕಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಹೋಗಿದೆ. ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮ ಲೆಕ್ಕಾಽಕಾರಿ ಗಂಗಾಧರ ಮೇದಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಾಲೂಕು ಆಡಳಿತದಿಂದ ಸಂತ್ರಸ್ತ ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮದ ಮುಖಂಡರು ಆಗ್ರಹಿಸಿದ್ದಾರೆ.