ಜಿಲ್ಲೆ

ಸೋಯಾಕ್ಕೆ ಒಣಗುವ ಔಷಧ ಸಿಂಪಡಿಸಿದ ಕಿಡಿಗೇಡಿಗಳು

ಹುಲಸೂರು: ಭಾಲ್ಕಿ ತಾಲೂಕಿನ ಜಾಮಖಂಡಿ ಗ್ರಾಮ ಹೊರವಲಯದ ಬಾಲಿಕಾ ಸೋಮವಂಶಿ ಅವರ ಒಂಬತ್ತು ಎಕರೆಯಲ್ಲಿ ಬೆಳೆದಿದ್ದ ಸೋಯಾ ಮತ್ತು ತೊಗರಿಗೆ ಕಿಡಿಗೇಡಿಗಳು ಬೆಳೆ ಒಣಗುವ ಔಷಧ ಸಿಂಪಡಿಸಿದ್ದು, ಸಂಪೂರ್ಣ ಒಣಗಿ ಹೋಗಿದೆ. ಬಾಲಿಕಾ ಸೋಮವಂಶಿ ಮೂಲತಃ ಮಹಾರಾಷ್ಟçದ ಲಾತೂರದವರು. ಅವರ ತಂದೆ ನೀಡಿರುವ ಜಮೀನು ಇದಾಗಿದೆ. ಬಿತ್ತನೆ ಹಾಗೂ ಕಳೆ ತೆಗೆಯುವಾಗ ಮತ್ತು ರಾಶಿ ಮಾಡುವಾಗ ಮಾತ್ರ ಹೊಲಕ್ಕೆ ಬರುತ್ತಾರೆ. ಆ.೨೮ರಂದು ಬೆಳೆ ವೀಕ್ಷಿಸಿದಾಗ ಬೆಳೆ ಸಮೃದ್ಧವಾಗಿತ್ತು. ಆದರೆ ಸೆ.೪ರಂದು ವೀಕ್ಷಣೆಗೆ ಬಂದಾಗ ಸುಟ್ಟಿರುವುದು ಗಮನಕ್ಕೆ ಬಂದಿದ್ದು, ಮೇಹಕರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪಿಎಸ್‌ಐ ಶಿವಕುಮಾರ ಬಳಕೆ ಮತ್ತು ಸಿಬ್ಬಂದಿ ಗೌಸೋದ್ದಿನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.