ಸೋಮವಾರಪೇಟೆ: ಪಟ್ಟಣದಲ್ಲಿ ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ರಸ್ತೆಗಳು ಹೊಂಡಗಳಾಂತಾಗಿ ಸಂಚಾರ ವ್ಯವಸ್ಥೆ ಕೆಲ ಕಾಲ ಅಸ್ತವ್ಯಸ್ತವಾಗಿತ್ತು.
ಅಲೇಕಟ್ಟೆ ರಸ್ತೆಯಲ್ಲಿ ನೀರು ಸಂಗ್ರಹವಾಗಿ ಯೋಗೇಂದ್ರ ಅವರ ಮನೆಗೆ ನೀರು ಹರಿದು ಸಮಸ್ಯೆಯಾಗಿತ್ತು. ವಿವೇಕಾನಂದ ಸರ್ಕಲ್‌ನ ಶ್ರೀ ವೆಂಕಟರಮಣ ದೇವಾಲಯದ ಸಮೀಪದ ಲಿಂಗರಾಜು ಅವರ ಮನೆ ಅಂಗಳಕ್ಕೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ನಂತರ ಜೆಸಿಬಿ ಮೂಲಕ ಚರಂಡಿಯನ್ನು ಸ್ವಚ್ಛಗೊಳಿಸಲಾಯಿತು.
ಗ್ರಾಮೀಣ ಭಾಗದ ಕೆಲವೆಡೆ 2 ರಿಂದ 3 ಇಂಚಿನಷ್ಟು ಮಳೆ ಸುರಿದಿದೆ. ಕಾಫಿ ತೋಟಗಳಲ್ಲಿ ಶೀತ ವಾತಾವರಣ ಹೆಚ್ಚಾಗಿ, ಕಾಫಿ ಕೊಳೆ ರೋಗಕ್ಕೆ ತುತ್ತಾಗುವ ಸಂಭವವಿದೆ. ಕಾಳುಮೆಣಸಿಗೆ ಹಾನಿಯಾಗಿದೆ ಎಂದು ಬೆಳೆಗಾರರು ತಿಳಿಸಿದ್ದಾರೆ.