ಕೊಳ್ಳೇಗಾಲ: ಕನ್ನಡ ಹಾಡು ಕೇಳಿದ್ದಕ್ಕೆ ಪಹಲ್ಗಾಮ್ ದಾಳಿಗೆ ಹೋಲಿಕೆ ಮಾಡಿದ ಗಾಯಕ ಸೋನು ನಿಗಮ್ ವಿರುದ್ಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಕರವೇ (ನಾರಾಯಣ ಗೌಡ) ಬಣ ಪದಾಧಿಕಾರಿಗಳು ಪಟ್ಟಣದ ಎಂಜಿಎಸ್‌ವಿ ವೃತ್ತದಲ್ಲಿ ಸೋನು ನಿಗಮ್ ಪೋಸ್ಟರ್‌ಗೆ ಚಪ್ಪಲಿ ಹಾರ ಹಾಕಿ ಆಕ್ರೋಶ ಹಾಕಿದರು. ಕೊಳ್ಳೇಗಾಲ ತಾಲೂಕು ಘಟಕದ ಅಧ್ಯಕ್ಷ ಅಯಾಜ್ ಕನ್ನಡಿಗ, ಗೌರವಾಧ್ಯಕ್ಷ ನಿಸಾರ್ ಅಹ್ಮದ್, ಇದ್ರಿಷ್ ಪಾಷಾ, ಉಪಾಧ್ಯಕ್ಷ ಕುಮಾರ್ ಸಮೀರ್, ನಿಂಗರಾಜು, ತೌಸೀಫ್, ಇರ್ಫಾನ್ ಇನ್ನಿತರರು ಇದ್ದರು.