ಜಿಲ್ಲೆ

ಸೋತೂ ಗೆದ್ದ ಮಹಿಳೆ !

Bidar

ಬೀದರ್: ತಾಲೂಕಿನ ಕೊಳಾರ್(ಕೆ) ಗ್ರಾಮದ ಮೀಸಲು ಕ್ಷೇತ್ರದಲ್ಲಿ ಸೋತ ಮಹಿಳಾ ಅಭ್ಯರ್ಥಿಯೊಬ್ಬರಿಗೆ ಇತರ ಕ್ಷೇತ್ರದಿಂದ ಗೆಲುವಿನ ಭಾಗ್ಯ ಒಲಿದಿರುವುದು ವಿಶೇಷ.

ಎಸ್ಸಿ ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಾಂತಮ್ಮ ದೇವಿಂದ್ರಪ್ಪ 310 ಮತ ಪಡೆದು ಗೆಲುವು ಸಾಧಿಸಿದ್ದರು. ಇವರ ಪ್ರತಿಸ್ಪರ್ಧಿ ಶೋಭಾರಾಣಿ ಗುಂಡಪ್ಪ 285 ಮತ ಪಡೆದು ಪರಾಜಿತರಾಗಿದ್ದರು. ಆದರೆ ಇನ್ನೊಂದು ಎಸ್ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಲಕ್ಷ್ಮಣ ಮಾದಪ್ಪ ಅತ್ಯಧಿಕ 223 ಮತ ಪಡೆದಿದ್ದರು. ಇವರಿಗಿಂತ ಎಸ್ಸಿ ಮಹಿಳಾ ಕ್ಷೇತ್ರದ ಅಭ್ಯರ್ಥಿ ಶೋಭಾರಾಣಿ ಅಧಿಕ ಮತ (285) ಪಡೆದಿದ್ದರಿಂದ ಪಂಚಾಯತ್ ರಾಜ್ ಕಾಯ್ದೆ ನಿಯಮದ ಪ್ರಕಾರ ಇವರನ್ನು ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾಗಿ ಚುನಾವಣೆ ಅಧಿಕಾರಿ ಘೋಷಣೆ ಮಾಡಿದರು. ಒಂದು ಕ್ಷೇತ್ರದಲ್ಲಿ ಸೋತರೂ ಇನ್ನೊಂದು ಕ್ಷೇತ್ರದಲ್ಲಿ ಅದೃಷ್ಟ ಕೈಹಿಡಿದಿರುವುದು ವಿಶೇಷ.