ಸಾಲಿಗ್ರಾಮ: ಕಾಂಗ್ರೆಸ್ ಮುಖಂಡ ರವಿಶಂಕರ್ ಅವರು 2 ಬಾರಿ ಸೋತಿದ್ದರೂ ಕಾರ್ಯಕರ್ತರ ಮತ್ತು ಜನಪರ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರನ್ನು ಈ ಬಾರಿ ಹೆಚ್ಚು ಮತಗಳಿಂದ ಗೆಲ್ಲಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯ ಯತಿರಾಜ್ ಮನವಿ ಮಾಡಿದರು.
ಚಿಕ್ಕಭೇರ್ಯ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಜನಾಶೀರ್ವಾದ ಕಾರ್ಯಕ್ರಮದಲ್ಲಿ ರವಿಶಂಕರ್ ಅವರಿಗೆ 10 ಸಾವಿರ ರೂ.ದೇಣಿಗೆ ನೀಡಿ ಮಾತನಾಡಿದರು. ಹಣ ಆಮಿಷಗಳಿಂದ ಜನರ ಮನಸ್ಸನ್ನು ಸೆಳೆಯಲು ಸಾಧ್ಯವಿಲ್ಲ. ಪ್ರೀತಿ, ವಿಶ್ವಾಸದಿಂದ ಮಾತ್ರ ಜನರನ್ನು ಗೆಲ್ಲಲು ಸಾಧ್ಯ. ಹಾಗಾಗಿ 10 ವರ್ಷಗಳಿಂದ ರವಿಶಂಕರ್ ಅವರು ಜನರ ಪ್ರೀತಿ, ವಿಶ್ವಾಸ ಗೆಲ್ಲುತ್ತ ಬರುತ್ತಿದ್ದಾರೆ. ಕಳೆದ ಬಾರಿ ಅಲ್ಪ ಮತಗಳಿಂದ ಅವರು ಸೋಲು ಅನುಭವಿಸಿದ್ದರು. ಈ ಬಾರಿ ಅವರಿಗೆ ಅವಕಾಶ ನೀಡುವಂತೆ ಕಾರ್ಯಕರ್ತರು ಮತ್ತು ಮತದಾರರಲ್ಲಿ ಮನವಿ ಮಾಡಿದರು.
ರವಿಶಂಕರ್ ಕುಟುಂಬ ಸಮೇತವಾಗಿ ಜನಾಶೀರ್ವಾದ ಕಾರ್ಯಕ್ರಮದಲ್ಲಿ ತೊಡಗಿರುವುದು ಎಲ್ಲರ ಗಮನ ಸೆಳೆಯುತ್ತಿದೆ. 75 ದಿನಗಳ ಕಾಂಗ್ರೆಸ್ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಪ್ರತಿ ಕುಟುಂಬದ ಆಶೀರ್ವಾದ ಪಡೆಯುತ್ತಿರುವ ರವಿಶಂಕರ್ ಅವರಿಗೆ ಅಪಾರ ಜನಬೆಂಬಲ ವ್ಯಕ್ತವಾಗುತ್ತಿದೆ. ಕಾರ್ಯಕ್ರಮದಲ್ಲಿ ಎಸ್‌ಟಿ ಘಟಕದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್, ಕೆ.ಆರ್.ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೂರು ಮಹದೇವ್, ಮಿರ್ಲೆ ಹರೀಶ್, ಗ್ರಾಪಂ ಸದಸ್ಯೆ ಕಾಳಮ್ಮ ಕುಳ್ಳಯ್ಯ, ಧನು, ಜವರನಾಯಕ, ಪ್ರಸಾದ್, ಸಿದ್ದಿಕ್, ರಮೇಶ್, ವೆಂಕಟೇಶ್, ಪುನಿ, ರಾಮನಾಯಕ, ಮಂಜು, ರಮಾನ್, ಅನೀಲ್, ಗೋಪಾಲ್, ದೇವರಾಜ್, ಗಂಗಾಧರ ಇತರರು ಇದ್ದರು.