ಸೋಮವಾರಪೇಟೆ: ಭಾರತ ಜೆಸಿಐ ವತಿಯಿಂದ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ (ನ್ಯಾಷನಲ್ ಲೆವೆಲ್ ಟ್ಯಾಲೆಂಟ್ ಸರ್ಚ್ ಎಕ್ಸಾಮಿನೇಷನ್)ಸಂತ ಜೊಸೇಫರ ಪದವಿ ಕಾಲೇಜಿನಲ್ಲಿ ಮಂಗಳವಾರ ನಡೆಯಿತು.
ತಾಲೂಕಿನ 14 ಶಾಲೆಗಳ 700 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ರಾಷ್ಟ್ರಮಟ್ಟದ ಈ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 40 ಸಾವಿರ ರೂ.ನಗದು, ದ್ವಿತೀಯ 20 ಸಾವಿರ, ತೃತೀಯ 10 ಸಾವಿರ ಮತ್ತು ಟ್ರೋಫಿಯನ್ನು ನೀಡಲಾಗುತ್ತದೆ. ರಾಜ್ಯಮಟ್ಟದಲ್ಲಿ ವಿಜೇತರಾದವರಿಗೆ ಪ್ರಥಮ 7500 ರೂ., ದ್ವಿತೀಯ 5000 ರೂ., ತೃತೀಯ 3000 ರೂ., ನಗದು ಟ್ರೋಫಿಯನ್ನು ಜೆಸಿಐ ವಲಯ ಮಟ್ಟದಲ್ಲಿ ನೀಡಲಾಗುವುದು ಎಂದು ಜೆಸಿಐ ಅಧ್ಯಕ್ಷೆ ಎಂ.ಎ. ರುಬೀನಾ ತಿಳಿಸಿದ್ದಾರೆ.
ಜೆಸಿಐನ ಕಾರ್ಯದರ್ಶಿ ಜಗದಾಂಭ ಗುರುಪ್ರಸಾದ್, ಜೂನಿಯರ್ ಜೇಸಿ ಅಧ್ಯಕ್ಷೆ ರಿಶಾ, ಪ್ರಮುಖರಾದ ಕೆ.ಎ. ಪ್ರಕಾಶ್, ವಿನುತಾಸುದೀಪ್, ರವಿಕುಮಾರ್, ನೆಲ್ಸನ್, ಲಿಕ್ಕಿ ಇದ್ದರು.