ಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ರಾಜರಾಜೇಶ್ವರೀ ವಿದ್ಯಾರ್ಥಿ ಪರಿಷತ್ ವತಿಯಿಂದ ಚಾತುರ್ವಸ್ಯದ ಸೇವೆಯಾಗಿ ಸಮರ್ಪಿಸಿದ ಎಫ್ಟಿಟಿಎಚ್ (ಫೈಬರ್ ಟು ದಿ ಹೋಮ್ ಕೇಬಲ್ ಸಂಪರ್ಕಕ್ಕೆ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಚಾಲನೆ ನೀಡಿದರು.
ಈ ವೇಳೆ ಆಶೀರ್ವಚನ ನೀಡಿದ, ಈ ದಿನ ಐತಿಹಾಸಿಕ ಕ್ಷಣವಾಗಿದೆ. ಕರೊನಾ ವೈರಸ್ನಿಂದಾಗಿ ಭಕ್ತ-ಶಿಷ್ಯರ ಸಂಪರ್ಕವೇ ಇಲ್ಲದಂತಾಗಿತ್ತು. ಈ ಸಮಸ್ಯೆ ಇಂದು ದೂರವಾದಂತಾಯಿತು. ಕ್ಷಣಕ್ಷಣದ ಮಾಹಿತಿಯನ್ನು ಕೂಡಲೆ ವಿಶ್ವದಾದ್ಯಂತ ಇರುವ ಭಕ್ತ-ಶಿಷ್ಯರಿಗೆ ತಲುಪಿಸುವ ಸುಸಂದರ್ಭ ಒದಗಿಬಂದಿದೆ. ಸಂಪರ್ಕ ಮಾಡುವವರಿಗೆ ಅನುಕೂಲವಾಗಲಿದೆ. ವಿಶ್ವದ ಜನರನ್ನು ಸನ್ಮಾರ್ಗಕ್ಕೆ ಕರೆದುಕೊಂಡು ಹೋಗುವುದು ಮತ್ತು ಜಗತ್ತಿನ ಎಲ್ಲ ಕಡೆಯ ಒಳ್ಳೆಯ ವಿಚಾರಗಳು ನಮಗೆ ತಲುಪಬೇಕು ಎನ್ನುವ ಈ ಎರಡು ವಿಷಯಗಳನ್ನು ಸಾಧ್ಯವಾಗಿಸುವುದು ಈ ಸಂಪರ್ಕದ ಉದ್ದೇಶವಾಗಿದೆ ಎಂದರು. ಫ್ರಾಂಚೈಸಿ ಸುಹಾಸ ಹೆಗಡೆ, ಸುಬ್ರಾಯ ಹೆಗಡೆ, ಶಾಲ್ಮಲಾ ಬಳಗದ ಅಧ್ಯಕ್ಷ ಗಜಾನನ ಭಟ್ಟ, ಮಠದ ವ್ಯವಸ್ಥಾಪಕ ಎಸ್.ಎನ್. ಗಾಂವಕರ, ನಾರಾಯಣ ಭಟ್ಟ. ಇತರರು ಉಪಸ್ಥಿತರಿದ್ದರು.