ಜಿಲ್ಲೆ

ಸೋಂಕಿತ ಯುವಕ ಗುಣವಾಗಿ ಬಿಡುಗಡೆ

ಮುಂಡಗೋಡ: ಪಟ್ಟಣದ ಕೋವಿಡ್ ಹೆಲ್ತ್​ಕೇರ್ ಸೆಂಟರ್​ನಲ್ಲಿ ದಾಖಲಾಗಿ ಗುಣಗೊಂಡ ಮಜ್ಜಿಗೇರಿ ಯುವಕನನ್ನು ಆರೋಗ್ಯ ಇಲಾಖೆಯವರು ಸೋಮವಾರ ಹೂಗುಚ್ಛ ನೀಡಿ ಬೀಳ್ಕೊಟ್ಟರು.

ತಾಲೂಕಿನ ಮಜ್ಜಿಗೇರಿ ಗ್ರಾಮಕ್ಕೆ ಬೆಂಗಳೂರಿನಿಂದ ಬಂದಿದ್ದ ಯುವಕನಿಗೆ ಜು. 2ರಂದು ಕರೊನಾ ಸೋಂಕು ದೃಢಪಟ್ಟಿತ್ತು. ಈತ ಇಲ್ಲಿನ ತಾಲೂಕು ಆಸ್ಪತ್ರೆಯ ಕೋವಿಡ್ ಹೆಲ್ತ್​ಕೇರ್ ಸೆಂಟರ್​ನಲ್ಲಿ ದಾಖಲಾಗಿದ್ದ ಮೊದಲ ಸೋಂಕಿತನಾಗಿದ್ದ. ಈ ವೇಳೆ ತಾಲೂಕು ಆಡಳಿತ ವೈದ್ಯಾಧಿಕಾರಿ ಎಚ್.ಎಫ್. ಇಂಗಳೆ, ಪ.ಪಂ. ಮುಖ್ಯಾಧಿಕಾರಿ ಸಂಗನಬಸಯ್ಯ, ಆರೋಗ್ಯ ಇಲಾಖೆಯ ಸಿಬ್ಬಂದಿ ವೀಣಾ ರಾಠೋಡ ಇತರರಿದ್ದರು.