oplus_131074 
ಜಿಲ್ಲೆ

ಸೊಳ್ಳೆ ತಾಣ ನಾಶ ಪಡಿಸಿ

ಚಿತ್ರದುರ್ಗ: ತೆರೆದ ಪರಿಕರಗಳಲ್ಲಿ ನೀರು ಸಂಗ್ರಹಿಸಬೇಡಿ. ಸೊಳ್ಳೆಗಳ ತಾಣವಾಗದಂತೆ ಕ್ರಮವಹಿಸುವ ಮೂಲಕ ಡೆಂೆ ನಿಯಂತ್ರಿಸ ಬೇಕೆಂದು ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗೀರೀಶ್ ಹೇಳಿದರು. ಚಿತ್ರದುರ್ಗದೆಲ್ಲ ವಾರ್ಡ್‌ಗಳಲ್ಲಿ ಡೆಂೆ ನಿಯ ಂತ್ರಣಕ್ಕಾಗಿ ವಿಶೇಷ ಲಾರ್ವಾ ಸಮೀಕ್ಷೆ ನಡೆಯುತ್ತಿದ್ದು,ತಾಲೂಕು ಆರೋಗ್ಯಾಧಿಕಾರಿ ತಂಡ ಮೇಲ್ವಿಚಾರಣಾ ನಡೆಸಿ,ವಿವಿಧ ಕಾಲನಿಗಳಲ್ಲಿ ಸೊಳ್ಳೆಗಳ ತಾಣ ನಾಶ ಕಾರ‌್ಯಾಚರಣೆ ಬಳಿಕ ಅವರು ಮಾತನಾಡಿದರು.
ಸಾರ್ವಜನಿಕರು ತೆರೆದ ಪರಿಕರಗಳಲ್ಲಿ ನೀರು ಸಂಗ್ರಹಿಸಿರುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗುತ್ತಿದ್ದು, ಈ ನಿಟ್ಟಿನಲ್ಲಿ ಎಚ್ಚರ ವಹಿಸಬೇಕು. ಡೆಂೆ ನಿಯಂತ್ರಣಕ್ಕೆ ನಾವೆಲ್ಲರೂ ಒಟ್ಟಾಗಿ ಪರಿಸರ ಸ್ವಚ್ಛತೆ ಕಾಪಾಡೋಣ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಂಕರ್‌ನಾಯ್ಕ,ಆಶಾ ಕಾರ್ಯಕರ್ತೆ ಶೋಭಾ ಮತ್ತಿತರರು ಇದ್ದರು.