ಕಲಬುರಗಿ: ಸೊಲ್ಲಾಪುರ-ಹಾಸನ ಎಕ್ಸ್ಪ್ರೆಸ್ ರೈಲು ಪುನರಾರಂಭಿಸಲು ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿದ್ದು, 14ರಂದು ಈ ರೈಲು ಸೇವೆ ಶುರುವಾಗಲಿದೆ ಎಂದು ಸಂಸದ ಡಾ.ಉಮೇಶ ಜಾಧವ್ ತಿಳಿಸಿದ್ದಾರೆ.
ರೈಲ್ವೆ ಸಚಿವ ಪಿಯೂಷ್ ಗೋಯಲ್ ಜತೆ ಚರ್ಚಿಸಲಾಗಿದ್ದು, ಕೋವಿಡ್-19ನಿಂದಾಗಿ ಸ್ಥಗಿತಗೊಂಡಿದ್ದ ಸೊಲ್ಲಾಪುರ-ಯಶ್ವಂತಪುರ-ಹಾಸನ ಎಕ್ಸ್ಪ್ರೆಸ್ ರೈಲು ಸೇವೆ ಪುನರಾರಂಭಿಸುವಂತೆ ಕೋರಲಾಗಿತ್ತು.
ದಿಲ್ಲಿಯಲ್ಲಿ 9ರಂದು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗಿದ್ದು, 14ರಿಂದ ಈ ರೈಲು ಸೇವೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಇದರಿಂದ ಕಲಬುರಗಿ ಮತ್ತು ಈ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ತಮ್ಮ ಮನವಿಗೆ ಸ್ಪಂದಿಸಿದ ಸಚಿವ ಗೋಯಲ್ ಮತ್ತು ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಡಾ.ಜಾಧವ್ ತಿಳಿಸಿದ್ದಾರೆ.