ಜಿಲ್ಲೆ

ಸೊರಬದಲ್ಲಿ ಪೊಲೀಸ್ ವಸತಿ ಸಂಕೀರ್ಣಕ್ಕೆ ಕುಮಾರ್ ಬಂಗಾರಪ್ಪ ಗುದ್ದಲಿಪೂಜೆ

ಸೊರಬ: ಸಕಾಲದಲ್ಲಿ ಮೂಲ ಸೌರ್ಕಗಳನ್ನು ನೀಡುವ ಮೂಲಕ ಅಗತ್ಯ ಇರುವ ಪೊಲೀಸ್ ವಸತಿಗೃಹ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.

ಸೋಮವಾರ ಪಟ್ಟಣದ ಪೊಲೀಸ್ ವಸತಿ ಸಂಕೀರ್ಣದ ಆವರಣದಲ್ಲಿ 12 ಪೊಲೀಸ್ ವಸತಿ ಗೃಹಗಳ ನಿರ್ಮಾಣದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಪಟ್ಟಣದಲ್ಲಿರುವ ಪೊಲೀಸ್ ವಸತಿಗೃಹಗಳು ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದ್ದು ಸುಸಜ್ಜಿತವಾದ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸುವ ಉದ್ದೇಶದಿಂದ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಿದೆ. ಗುಣಮಟ್ಟದ ಹಾಗೂ ಶಾಶ್ವತವಾಗಿ ಕಟ್ಟಡಗಳು ಬಾಳಿಕೆ ಬರುವ ರೀತಿ ಕಟ್ಟಡಗಳನ್ನು ನಿರ್ಮಿಸಬೇಕು ಎಂದರು.

ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು ರಸ್ತೆ, ಸಾರಿಗೆ, ಶಿಕ್ಷಣ, ಕೃಷಿ, ಲೋಕೋಪಯೋಗಿ, ನೀರಾವರಿ ಸೇರಿದಂತೆ ವಿವಿಧ ಅಭಿವೃದ್ಧಿ ಪರ ಯೋಜನೆಗಳಿಗೆ ಸರ್ಕಾರ ಅಪಾರ ಪ್ರಮಾಣದ ಹಣಕಾಸು, ಅನುದಾನವನ್ನು ನೀಡುತ್ತಿದೆ ಎಂದು ಹೇಳಿದರು.