ಸಮಾಜಮುಖಿ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ
ವಿಜಯವಾಣಿ ಸುದ್ದಿಜಾಲ ಸೊನ್ನ (ಕಲಬುರಗಿ)
ವ್ಯಕ್ತಿ ನಮ್ಮೊಂದಿಗೆ ಇಲ್ಲದಾಗ ಅವರು ಮಾಡಿದ ಉತ್ತಮ ಕೆಲಸಗಳು ಸ್ಮರಿಸುತ್ತೇವೆ. ಸಮಾಜಮುಖಿ ಕಾರ್ಯಗಳು ಶಾಶ್ವತವಾಗಿರುತ್ತವೆ, ಹೊರತು ಸಾಯುವುದಿಲ್ಲ ಎಂದು ಸೊನ್ನ ವಿರಕ್ತಮಠದ ಹಾಗೂ ತ್ರಿವಿಧ ದಾಸೋಹ ಮಠದ ಪೂಜ್ಯ ಡಾ.ಶಿವಾನಂದ ಮಹಾಸ್ವಾಮಿಗಳು ಹೇಳಿದರು.
ಬೀದರ್-ವಿಜಯಪುರ ರಾಷ್ಟಿçÃಯ ಹೆದ್ದಾರಿಯಲ್ಲಿರುವ ಜೇವರ್ಗಿ ತಾಲೂಕಿನ ಸೊನ್ನ ಕ್ರಾಸ್ ಬಳಿ ಲಿಂ.ಮಲ್ಲಿಕಾರ್ಜುನ ಬಿರಾದಾರ ಸ್ಮರಣಾರ್ಥ ಅವರ ಪರಿವಾದವರು ಸೇರಿಕೊಂಡು ಸುತ್ತಲಿನ ಹಳ್ಳಿಗಳ ಪ್ರಯಾಣಿಕರ ಮತ್ತು ಜನರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ತಂಗುದಾಣವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಜನಚಿಂತನೆಯೊAದಿಗೆ ಮಾಡಿದ ಕಾರ್ಯವನ್ನು ಶ್ಲಾಘಿಸಿದರು.
ಹುಟ್ಟಿದ ಪ್ರತಿಯೊಬ್ಬರು ಒಂದು ದಿನ ಸಾಯುತ್ತೇವೆ. ಆದರೆ, ನಾವು ಇಲ್ಲಿಂದ ಹೋದ ಮೇಲೆ ನಮ್ಮ ಕೆಲಸಗಳು ಮಾತನಾಡುವ ಮೂಲಕ ಸದಾ ಜೀವಂತವಾಗಿರುವAತ ಕೆಲಸಗಳನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು. ಲಿಂ.ಮಲ್ಲಿಕಾರ್ಜುನ ಬಿರಾದಾರ ಅವರು ಹಾಗೆ ಬದುಕಿದ್ದರು. ಈಗ ಅವರ ನೆನಪಿಗಾಗಿ ತುಂಗುದಾಣ ಮಾಡಿ, ಅಲ್ಲಿ ಆಸನಗಳನ್ನು ಹಾಕಿ ಹೋಗಿ ಬರುವ ಜನರಿಗೆ ಅನುವು ಮಾಡಿಕೊಟ್ಟಿರುವುದು ಇತರರಿಗೆ ಮಾದರಿಯಾಗಿದೆ ಎಂದರು.
ಸೊನ್ನ ಕ್ರಾಸ್‌ನಲ್ಲಿದ್ದ ಬಸ್ ನಿಲ್ದಾಣ ರಸ್ತೆ ಅಗಲ ಮಾಡುವಾಗ ನೆಲಸಮ ಮಾಡಲಾಗಿತ್ತು. ಪ್ರಯಾಣಿಕರು ಕುಳಿತುಕೊಳ್ಳಲು ಪರದಾಡುವಂತಿತ್ತು. ಈಗ ಅದಕ್ಕೊಂದು ಪರಿಹಾರ ಸ್ಕಿಕಿದೆ ಎಂದು ನ್ಯಾಯವಾದಿ ಬಸವರಾಜ ಬಿರಾದಾರ ಹೇಳಿದರು.
ಪ್ರಮುಖರಾದ ಶಾಂತಪ್ಪ ಹೊಸಮನಿ. ವಿಜಯಕುಮಾರ ಬಿರಾದಾರ .ಲಕ್ಷö್ಮಣ ಗುಬ್ಬೆವಾಡ, ಮಲ್ಲಿಕಾರ್ಜುನ ಬಿರಾದಾರ, ಗುರುರಾಜ ನಿಪ್ಪಾಣಿ,ಶಿವಾನಂದ ಬಿರಾದಾರ. ಬಸವರಾಜ ಜೇವರ್ಗಿ, ಚನ್ನಬಸಮ್ಮ ಬಿರಾದಾರ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು. ಬಳಿಕ ಅನ್ನ ಸಂತರ್ಪಣೆ ಜರುಗಿತು.