ಜಿಲ್ಲೆ

ಸೈಬರ್ ಸುರಕ್ಷೆ ಪರಿಣಿತರ ಅಗತ್ಯ

Kalaburagi

ಕಲಬುರಗಿ: ಹೆಚ್ಚುತ್ತಿರುವ ಕಂಪ್ಯೂಟರಿಕರಣದ ಬೇಡಿಕೆ, ಆನ್ಲೈನ್ ತರಬೇತಿ ಹಾಗೂ ವಾಣಿಜ್ಯ ವ್ಯವಹಾರ ಸುರಕ್ಷಿತವಾಗಿ ಕೈಗೊಳ್ಳುವ ನಿಟ್ಟಿನಲ್ಲಿ ಸೈಬರ್ ಸುರಕ್ಷತೆ ಮುಖ್ಯ ಪಾತ್ರ ವಹಿಸುತ್ತದೆ. ದೇಶಕ್ಕೆ ಸೈಬರ್ ಸುರಕ್ಷೆ ಪರಿಣಿತರ ಅಗತ್ಯವಿದೆ ಎಂದು ಹೈದರಾಬಾದ್ ಕನರ್ಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಹೇಳಿದರು.
ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಪಠ್ಯಕ್ರಮದ ಜತೆಗೆ ಸೈಬರ್ ಸುರಕ್ಷೆ ತರಬೇತಿ ನಡೆಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜು ಸೈಬರ್ ಸೆಕ್ಯುರಿಟಿ ತರಬೇತಿ ಕೇಂದ್ರ ಸ್ಥಾಪಿಸಿ ಅದರ ಅಡಿಯಲ್ಲಿ ಅನೇಕ ರೀತಿಯ ಕೋರ್ಸಗಳನ್ನು ನಡೆಸಲು ಮುಂದಾಗಿದೆ ಎಂದರು.
ಕನರ್ಾಲ್ ಪ್ರದೀಪ ಭಟ್ಟಿ ಮಾತನಾಡಿ, ಇಂಜಿನಿಯರಿಂಗ್ ವಿದ್ಯಾಥರ್ಿಗಳು ಈ ನಿಟ್ಟಿನಲ್ಲಿ ಕರ್ತವ್ಯ ನಿಭಾಯಿಸಿ ದೇಶದ ಸುರಕ್ಷತೆಗೆ ಪಣ ತೊಡಬೇಕು ಎಂದು ಹೇಳಿದರು.
ಆರ್. ಎಸ್.ಹಿರೇಮಠ, ಎಸ್.ಎಸ್.ಕಲಶಟ್ಟಿ, ಡಾ. ಶ್ರೀದೇವಿ ಸೋಮಾ, ಡಾ. ಸಿದ್ರಾಮ ಪಾಟೀಲ್,ಡಾ.ರವೀಂದ್ರ ಲಟ್ಟಿ, ಡಾ.ಸುಜಾತಾ ತೇರದಾಲ, ಡಾ.ಜಯಶ್ರೀ ಅಗರಖೇಡ, ಡಾ.ಪ್ರಕಾಶ ಪಟ್ಟಣ, ಡಾ.ಶೈಲಜಾ ಶಾಸ್ತ್ರಿ , ಶರಣಕುಮಾರ ಹುಲಿ, ಡಾ.ರಾಕೇಶ ಹುಡೆದ, ಪ್ರಶಾಂತ ದೇವಣಿ, ವಿಶ್ವನಾಥ ಗುಗವಾಡ, ರಾಜಲಕ್ಷ್ಮಿ ಬಿಲಗುಂದಿ ಉಪಸ್ಥಿತರಿದ್ದರು.
ಹೆಸರಾಂತ ಮಹಾವಿದ್ಯಾಲಯ ಹಾಗೂ ಕಂಪನಿಗಳ ಸೈಬರ್ ಸೆಕ್ಯುರಿಟಿ ಪರಿಣಿತರು ಸಂಪನ್ಮೂಲ ವ್ಯಕ್ತಿಗಳಾಗಿ ಈ ತರಬೇತಿಯಲ್ಲಿ ತಮ್ಮ ಜ್ಞಾನಾರ್ಜನೆ ಮಾಡಿದರು. ರಾಜ್ಯವಲ್ಲದೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಜಾರ್ಖಂಡ್ ಸೇರಿ ವಿವಿಧ ರಾಜ್ಯಗಳ 600 ಹೆಚ್ಚು ಪ್ರಾಧ್ಯಾಪಕರು, ವಿದ್ಯಾಥರ್ಿಗಳು ಹಾಗೂ ಸಂಶೋಧನಾ ವಿದ್ಯಾಥರ್ಿಗಳು ಈ ಕಾಯರ್ಾಗಾರದಲ್ಲಿ ಭಾಗವಹಿಸಿದ್ದರು.