ಕಲಬುರಗಿ: ಪ್ರತಿಯೊಬ್ಬರೂ ಸೈಬರ್ ಭದ್ರತೆ ಬಗ್ಗೆ ತಿಳಿದುಕೊಳ್ಳಬೇಕು. ನಿಮಗೆ ಪರಿಚಯ ಇಲ್ಲದವರ ಜತೆಗೆ ಯಾವುದೇ ಮಾಹಿತಿ ಹಂಚಿಕೊಳ್ಳಬೇಡಿ. ಬ್ಯಾಂಕ್ ಖಾತೆ ಹಾಗೂ ಇನ್ನಿತರ ವೈಯಕ್ತಿಕ ದಾಖಲೆಗಳನ್ನು ಗೌಪ್ಯವಾಗಿಡಿ ಎಂದು ಖಾಜಾ ಬಂದಾನವಾಜ್ ಇಂಜಿನಿಯರಿAಗ್ ಕಾಲೇಜಿನ ಕಂಪ್ಯೂಟರ್ ವಿe್ಞÁನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶಿರೀನ್ ಫಾತಿಮಾ ಸಲಹೆ ನೀಡಿದರು.
ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಪ್ರಾಣಿ ಶಾಸ್ತç ವಿಭಾಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸೈಬರ್ ಭದ್ರತೆ ಜಾಗೃತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಅಪರಿಚಿತರಿಂದ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಬ್ರೌಸರ್‌ನಲ್ಲಿ ಪಾಸ್‌ವರ್ಡ್ ಸೇವ್ ಮಾಡುವುದು ಅಪಾಯಕಾರಿ. ಸೋಷಿಯಲ್ ಮಿಡಿಯಾಗಳಲ್ಲಿ ಸೂಕ್ಷ್ಮ ಮಾಹಿತಿಯನ್ನು ಶೇರ್ ಮಾಡಿಕೊಳ್ಳಬೇಡಿ. ವೈಯಕ್ತಿಕ ಮಾಹಿತಿ ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕಿ ಆಯೇಷಾ ಕಿರಣ್ ಸೈಬರ್ ಭದ್ರತೆ, ಸೈಬರ್ ಸ್ಪೇಸ್, ಭದ್ರತಾ ಬೆದರಿಕೆಗಳ ವಿಧಗಳು, ಭದ್ರತಾ ಮೂಲ ಪರಿಶೀಲನಾಪಟ್ಟಿ, ಸುರಕ್ಷತಾ ಸಲಹೆಗಳ ಬಗ್ಗೆ ಉಪನ್ಯಾಸ ನೀಡಿದರು.
ಕಲಾ, ಭಾಷಾ, ಸಮಾಜ ವಿಜ್ಱಆನ ಮತ್ತು ವಿಜಾe್ಞನ ನಿಕಾಯದ ಡೀನ್ ಡಾ.ನಿಶಾತ್ ಆರೀಫ್ ಹುಸೇನಿ, ಪ್ರಾಧ್ಯಾಪಕರಾದ ಡಾ. ಫೆಮಿದ್, ಡಾ.ಹೀನಾ, ಆಫ್ಶಾನ್, ಡಾ.ಅತಿಯಾ ಸುಲ್ತಾನ್, ಡಾ.ಜಹಾನಾರ್, ಶಫಿ, ಡಾ.ಜೈನಬ್, ಡಾ.ಸನಾ, ಡಾ.ನಗ್ಮಾ, ಡಾ.ನಮ್ರತಾ ಇತರರಿದ್ದರು.
ಸೈಯ್ಯದ್ ಖಾತಿಜ್ ಸ್ವಾಗತಿಸಿದರು. ನಿರೂಪಣೆ ಮಾಡಿದರು. ಫೈಜ್ ನಾಜ್ ವಂದಿಸಿದರು.