ಜಿಲ್ಲೆ

ಸೈನಿಕರು ಹಗಲು-ರಾತ್ರಿ ದೇಶಕ್ಕಾಗಿ ಸೇವೆ

76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಚಿಕ್ಕಬೇಡಗೆರೆ ಗ್ರಾಮದ ನಿವೃತ್ತ ಸೈನಿಕ ಮೋಹನ್ ಕುಮಾರ್ ಅವರನ್ನು ಅವರ ಸ್ವಗೃಹದಲ್ಲಿ ದೇಶ ಭಕ್ತರ ಬಳಗದಿಂದ ಸೋಮವಾರ ಸನ್ಮಾನಿಸಲಾಯಿತು. ಕೇಶವಮೂರ್ತಿ, ಮಹೇಶ್, ಪ್ರಕಾಶ್, ಮಧು ಇತರರಿದ್ದರು.

ಬೇಲೂರು: 76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೇಲೂರು ಪಟ್ಟಣ ಸಮೀಪದ ಚಿಕ್ಕಬೇಡಗೆರೆ ಗ್ರಾಮದ ನಿವೃತ್ತ ಸೈನಿಕ ಮೋಹನ್ ಕುಮಾರ್ ಅವರನ್ನು ಅವರ ಸ್ವಗೃಹದಲ್ಲಿ ದೇಶ ಭಕ್ತರ ಬಳಗದಿಂದ ಭಾನುವಾರ ಸಂಜೆ ಸನ್ಮಾನಿಸಿ ಗೌರವಿಸಲಾಯಿತು.


ದೇಶ ಭಕ್ತರ ಬಳಗದ ಅಧ್ಯಕ್ಷ ಡಾ.ಸಂತೋಷ್ ಮಾತನಾಡಿ, ದೇಶಭಕ್ತರ ಬಳಗದ ಸೇನಾನಿಗಳು ಸಾಮಾಜಿಕವಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ವಿಶೇಷವೆಂದರೆ 76ನೇ ಸ್ವಾತಂತ್ರ್ಯ ದಿನದ ಅಂಗವಾಗಿ ದೇಶ ರಕ್ಷಣೆಯಲ್ಲಿ ಹಗಲು ರಾತ್ರಿ ಎನ್ನದೆ ಪ್ರಾಣದ ಹಂಗು ತೊರೆದು 21 ವರ್ಷಗಳವರೆಗೆ ಕಾರ್ಗಿಲ್ ಯುದ್ಧದಲ್ಲೂ ದೇಶಕ್ಕಾಗಿ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸೈನಿಕ ಮೋಹನ್‌ಕುಮಾರ್ ಅವರನ್ನು ಸನ್ಮಾನಿಸಬೇಕೆಂಬ ನಿಟ್ಟಿನಲ್ಲಿ ಅವರನ್ನು ಆಗಸ್ಟ್ 15ರ ಸ್ವಾತಂತ್ರ್ಯ ದಿನದ ಅಂಗವಾಗಿ ಸನ್ಮಾನಿಸುವ ಮೂಲಕ ಗೌರವಿಸುತ್ತಿದ್ದೇವೆ. ಇದೇ ರೀತಿ ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಇರುವ ಯೋಧರನ್ನು ದೇಶ ಭಕ್ತರ ಬಳಗದಿಂದ ಸನ್ಮಾನಿಸಲಾಗುವುದು ಎಂದು ಹೇಳಿದರು.


ದೇಶ ಭಕ್ತರ ಬಳಗದ ಕಾರ್ಯದರ್ಶಿ ಕೇಶವಮೂರ್ತಿ ಮಾತನಾಡಿ, ಬೇಲೂರು ತಾಲೂಕಿನಲ್ಲಿ ಸಾಕಷ್ಟು ಜನ ಯೋಧರಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಮುಖ್ಯ ವಾಹಿನಿಗೆ ತರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಭಾರತ ದೇಶಕ್ಕೆ ಯೋಧರ ಸೇವೆ ಅತ್ಯಂತ ಅವಶ್ಯಕವಾಗಿದ್ದು, ಯುವಕರಲ್ಲಿ ದೇಶದ ಸೈನ್ಯಕ್ಕೆ ಸೇರಲು ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ ಎಂದರು.


ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಸೈನಿಕ ಮೋಹನ್‌ಕುಮಾರ್, ದೇಶ ಭಕ್ತರ ಬಳಗದವರು ದೇಶಕ್ಕೆ ಸಲ್ಲಿಸಿದ ಸೇವೆ ಗುರುತಿಸಿ ಅಭಿನಂದಿಸಿರುವುದು ಸಂತೋಷವಾಗಿದೆ. ದೇಶ ಭಕ್ತರ ಬಳಗದವರು ಮುಂದಿನ ದಿನಗಳಲ್ಲಿ ಅನೇಕ ಉತ್ತಮವಾದ ಸಮಾಜಮುಖಿ ಕಾರ್ಯಗಳನ್ನು ಮಾಡಲಿ ಎಂದು ಆಶಿಸುತ್ತೇನೆ ಎಂದರು. ಪ್ರಧಾನ ಕಾರ್ಯದರ್ಶಿ ಮಹೇಶ್, ಖಜಾಂಚಿ ಪ್ರಕಾಶ್ ಸದಸ್ಯರಾದ ಮಧು ಇದ್ದರು.