ಜಿಲ್ಲೆ

ಸೈನಿಕರಿಗೆ ಗೌರವ ಸಲ್ಲಿಸಿ

ಸೋಮವಾರಪೇಟೆ : ಜೈಜವಾನ್ ಮಾಜಿ ಸೈನಿಕರ ಸಂಘದ ವತಿಯಿಂದ ಪತ್ರಿಕಾಭವನ ಸಭಾಂಗಣದಲ್ಲಿ ಬುಧವಾರ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು. ಸಿಆರ್‌ಪಿಎಫ್ ನಿವೃತ್ತ ಡೆಪ್ಯೂಟಿ ಕಮಾಡೆಂಟ್ ಮಂಜುನಾಥ್, ಅಮರ್ ಜವಾನ್ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಅವರು ಮಾತನಾಡಿ, ಸೈನಿಕರಿಗೆ ದೇಶ ಮೊದಲು, ನಂತರ ಕುಟುಂಬ ಎಂಬ ಸಂಕಲ್ಪ ಇರುತ್ತದೆ ಎಂದರು.
ಗಡಿಯಲ್ಲಿ ನನ್ನ ಸೇವೆ ಸಂದರ್ಭ ಅನೇಕ ಸ್ನೇಹಿತರ ಬಲಿದಾನವಾಗಿದೆ. ಇವತ್ತು ದೇಶದ ಜನತೆ ನೆಮ್ಮದಿಯಿಂದ ಇರಬೇಕೆಂದರೆ ಸೈನಿಕರ ತ್ಯಾಗದ ಪಾಲು ದೊಡ್ಡದು ಎಂದು ಹೇಳಿದರು.
ಸಂಘದ ಅಧ್ಯಕ್ಷ ಬಿ.ಆರ್.ಈರಪ್ಪ ಮಾತನಾಡಿ, ಪ್ರತಿಯೊಬ್ಬರೂ ದೇಶವನ್ನು, ದೇಶದ ಯೋಧರನ್ನು ಗೌರವಿಸಬೇಕು ಎಂದರು.
ಬಾಲಪ್ರತಿಭೆ ತ್ರೀಶಾ, ಸಂಘದ ಉಪಾಧ್ಯಕ್ಷ ಕ್ಯಾಪ್ಟನ್ ಸುಬ್ರಮಣಿ, ಕಾರ್ಯದರ್ಶಿ ಪ್ರಕಾಶ್, ಖಜಾಂಚಿ ಸುಕುಮಾರ್ ಇದ್ದರು.