ಬಾಗಲಕೋಟೆ: ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ನರಮೇಧದ ಬಳಿಕ ಯಾವುದೇ ಕ್ಷಣದಲ್ಲಿ ಭಾರತ-ಪಾಕ್ ಯುದ್ಧ ನಡೆಯಬಹುದು ಎನ್ನುವ ವಾತಾವರಣ ಕಂಡು ಬರುತ್ತಿದೆ.
ಹಾಗೊಂದು ವೇಳೆ ಯುದ್ಧ ಸಂಭವಿಸಿದಲ್ಲಿ ಈ ವೇಳೆ ನಮ್ಮ ಸೈನಿಕರಿಗೆ ಗಾಯಗಳಾದರೆ ಅವರಿಗೆ ಉಚಿತವಾಗಿ ಪ್ರಥಮ ಚಿಕಿತ್ಸೆ ನೀಡಲು ತಾವು ತಯಾರಿದ್ದು, ತಮಗೆ ಅನುಮತಿ ನೀಡುವಂತೆ ಬಾಗಲಕೋಟೆ ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಯ ಶುಶ್ರೂಷಕರು ಆಸ್ಪತ್ರೆಯ ಪ್ರಾಚಾರ್ಯರಿಗೆ ಪತ್ರ ಬರೆದಿದ್ದಾರೆ. ಉಚಿತ ಸೇವೆಗೆ ಅನುಮತಿ ನೀಡುವಂತೆ ಆಸ್ಪತ್ರೆಯ ೧೯ ಜನ ಶುಶ್ರೂಷಕರು ಪ್ರಾಚಾರ್ಯರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.