ಯರಗಟ್ಟಿ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಇಲ್ಲಿನ ಮಾಜಿ ಸೈನಿಕರ ಸಮನ್ವಯ ಸಮಿತಿ ಹಾಗೂ ಜೈ ಜವಾನ್ ಜೈ ಕಿಸಾನ್ ಸಹಕಾರಿ ಸಂಘದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಯರಗಟ್ಟಿಯಲ್ಲಿ ಎಲ್ಲ ಇಲಾಖೆಗಳ ಕಚೇರಿ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗಡಿ ಕಾಯುವ ಸೈನಿಕರ ಸೇವೆಗೆ ಸರಿಸಾಟಿ ಇನ್ನೊಂದಿಲ್ಲ. ಸೈನಿಕರ ಸೇವೆ ಮಾಡಲು ಸದಾ ಸಿದ್ಧನಿದ್ದೇನೆ ಎಂದರು.
ಮಾಜಿ ಸೈನಿಕ ಕುಮಾರ ಹಿರೇಮಠ ಮಾತನಾಡಿ, ಸೈನಿಕರ ಕುಟುಂಬಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 12 ವರ್ಷಗಳಿಂದ ಸಹಕಾರಿ ಸಂಘ ಹಾಗೂ ಮಾಜಿ ಸೈನಿಕರ ಸಮನ್ವಯ ಸಮಿತಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸಂಘದ ಅಧ್ಯಕ್ಷ ಎಂ.ಎಸ್.ಅಳಗೋಡಿ, ಎಂ.ಎಸ್.ಬಬಲಾದಿಮಠ, ಸಿದ್ದಪ್ಪ ದೇವರಡ್ಡಿ, ಬಸವರಾಜ ಹರಳಿ, ಮಲ್ಲಿಕಾರ್ಜುನ ಗಾಣಗಿ, ನಾಗಪ್ಪ ಮೆಟಗುಡ್ಡ, ಜಿ.ಎಸ್.ಪಟ್ಟಣಶೆಟ್ಟಿ, ಸೋಮಶೇಖರ ಉಜಿನಕೊಪ್ಪ, ನಾಗಪ್ಪ ಬಡವೆನ್ನವರ, ಬಸಪ್ಪ ಮಲ್ಲಾಪೂರ, ಪುಂಡಲೀಕ ತಳವಾರ, ರಾಜೇಶ ಕೊಂಜಾರ, ಹುಸೇನಸಾಬ್ ಕರ್ನಾಚಿ, ಮಹಾಂತೇಶ ಮಾದರ, ಎಂ.ಎನ್.ನದ್ಾ, ಎಂ.ಎಸ್. ಪಾಟೀಲ, ಪ್ರಕಾಶ ವಾಲಿ, ನಿಖಿಲ ಪಾಟೀಲ, ಕೃಷ್ಣಪ್ಪ ಬೆನಕಟ್ಟಿ ಇತರರು ಇದ್ದರು.