ಬಾಗಲಕೋಟೆ: ಜಮ್ಮು ಕಾಶ್ಮೀರದಲ್ಲಿ ಯೋಧರಿದ್ದ ವಾಹನ ಪ್ರಪಾತಕ್ಕೆ ಉರಳಿ ಸಾವನ್ನಪ್ಪಿದ್ದ ಸೈನಿಕರಲ್ಲಿ ಒಬ್ಬರಾದ ಮಹೇಶ್ ಮರಿಗೊಂಡ ಅವರ ಅಂತ್ಯಕ್ರಿಯೆ ತವರೂರು ಮಹಾಲಿಂಗಪುರ ಪಟ್ಟಣದಲ್ಲಿ ಗುರುವಾರ ಸಕಲ ಸರ್ಕಾರಿ ಗೌರವ ಹಾಗೂ ಅಪಾರ ಜನಸ್ತೋಮದ ಕಂಬನಿಗಳ ನಡುವೆ ಲಿಂಗಾಯತ ಸಂಪ್ರದಾಯದAತೆ ನೆರವೇರಿತು.
ಜೈ ಜವಾನ ಜೈ ಕಿಸಾನ, ವಂದೇ ಮಾತರಂ, ಮಹೇಶ್ ಅಮರ ರಹೇ, ಅಮರ ರಹೇ ಎಂದು ಪ್ರತಿಧ್ವನಿಸುವ ಘೋಷಣೆಗಳ ಜೊತೆಗೆ ಬಾರದ ಲೋಕಕ್ಕೆ ತೆರಳಿದ ಹುತಾತ್ಮ ಮಹೇಶ್ ಮರಿಗೊಂಡ ಅವರಿಗೆ ಜನರು ಅಂತಿಮ ವಿದಾಯ ಹೇಳಿದರು.
ಯೋಧ ಮಹೇಶ್ ಇನ್ನಿಲ್ಲ ಎನ್ನುವ ಸುದ್ದಿಯನ್ನು ಎರಡು ದಿನಗಳಿಂದ ಆತನ ಪತ್ನಿ ಲಕ್ಷಿ÷್ಮÃ ಹಾಗೂ ತಾಯಿ ಶಾರದಾ ಅವರಿಗೆ ತಿಳಿಸಿರಲಿಲ್ಲ. ಇಂದು ದಿಢೀರನೇ ಸಾವನ್ನಪ್ಪಿದ್ದಾನೆ ಎನ್ನುವ ಆಘಾತದ ವಿಷಯ ತಿಳಿದು ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಅವರ ರೋಧನ ಕಂಡು ನೆರೆದಿದ್ದ ಜನರ ಹೃದಯ ಹಿಂಡಿದAತಾಗಿತ್ತು.
ಜಮ್ಮು ಕಾಶ್ಮೀರದಲ್ಲಿ ಎಲ್ಲ ಪ್ರಕ್ರಿಯೆ ಮುಗಿಸಿ ಅಲ್ಲಿಂದ ಬುಧವಾರ ರಾತ್ರಿ ೧೧ ಗಂಟೆಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರ ತರಲಾಯಿತು. ಬೆಳಗಾವಿಯ ಮರಾಠ ರೆಜಿಮೆಂಟ್ ನಲ್ಲಿ ಇಟ್ಟಿದ್ದ ಪಾರ್ಥಿವ ಶರೀರವನ್ನು ಗುರುವಾರ ಬೆಳಗ್ಗೆ ರಸ್ತೆ ಮೂಲಕವಾಗಿ ಮಹಾಲಿಂಗಪುರ ಪಟ್ಟಣಕ್ಕೆ ತರಲಾಯಿತು. ಯೋಧನ ಪಾರ್ಥಿವ ಶರೀರ ಪಟ್ಟಣ ತಲುಪುತ್ತಿದ್ದಂತೆ ಜನರ ದುಃಖ ಇಮ್ಮಡಿಸಿತು. ಕುಟುಂಬಸ್ಥರು, ಸಂಬAಽಕರ ಕಣ್ಣೀರ ಕೋಡಿ ಹರಿಯಿತು.
ಸಾರ್ವಜನಿಕರಿಗೆ ಪಟ್ಟಣದ ಜಿಜಿಎಸ್ ಸ್ಕೂಲ್ ಮೈದಾನದಲ್ಲಿ ಯೋಧನ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಪಟ್ಟಣ ಮಾತ್ರವಲ್ಲದೇ ವಿವಿಧೆಡೆಯಿಂದ ಆಗಮಿಸಿದ್ದ ಅಪಾರ ಜನರು ಹಾಗೂ ಮಾಜಿ ಸೈನಿಕರು, ಕಿತ್ತೂರ ಸೈನಿಕ ಶಾಲೆಯ ವಿದ್ಯಾರ್ಥಿಗಳು ಅಂತಿಮ ನಮನ ಸಲ್ಲಿಸಿದರು.
ಯೋಧ ಮಹೇಶ್ ಮರಿಗೊಂಡ ಅವರ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ದಾರಿ ಯುದ್ದಕ್ಕೂ ಅಗಲಿದ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಮಹೇಶ್ ಅಮರ್ ರಹೇ ಅಮರ ರಹೇ ಎನ್ನುವ ಘೋಷಣೆಗೆ ಪ್ರತಿಧ್ವನಿಸಿದವು. ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬೆಲ್ಲದ ನಾಡಿನ ಹೆಮ್ಮೆಯ ಪುತ್ರನಿಗೆ ಅಂತಿಮ ವಿದಾಯ ಹೇಳಿದರು.
ಮೆರವಣಿಗೆ ಗಾಂಽ ಮೈದಾನದಿಂದ ಚನ್ನಮ್ಮ ಸರ್ಕಲ್, ಗಾಂಽ ವೃತ್ತ, ಜವಳಿ ಬಜಾರ, ನಡು ಚೌಕಿ, ಡಬಲ್ ರಸ್ತೆ, ಬಸವೇಶ್ವರ ಸರ್ಕಲ್, ಸಾಧುನ ಗುಡಿ ರಸ್ತೆ ಮಾರ್ಗವಾಗಿ ಕೆಂಗೇರಿಮಡ್ಡಿ ವರೆಗೂ ಸಾಗಿತು. ಅಲ್ಲಿನ ಸರ್ಕಾರಿ ಜಾಗೆಯಲ್ಲಿ ಹುತಾತ್ಮ ಯೋಧ ಮಹೇಶ್ ಪಾರ್ಥಿವ ಶರೀರಕ್ಕೆ ಸಹೋದರ ಸಂತೋಷ ಅವರಿಂದ ಪೂಜೆ ನಡೆಯಿತು. ಲಿಂಗಾಯತ ಸಂಪ್ರದಾಯದAತೆ ಅಪಾರ ಜನಸ್ತೋಮದ ದುಃಖದ ನಡುವೆ ಅಂತ್ಯಕ್ರಿಯೆ ನಡೆಸಲಾಯಿತು. ಈ ವೇಳೆ ಸರ್ಕಾರಿ ಹಾಗೂ ಮಿಲಿಟರಿ ಗೌರವಗಳೊಂದಿಗೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ನಮನ ಸಲ್ಲಿಸಲಾಯಿತು.