ಜಿಲ್ಲೆ

ಸೇವೆಯಿಂದ ಶೂಶ್ರೂಷಾಧಿಕಾರಿ ಅಮಾನತು

ಚಿತ್ರದುರ್ಗ: ಕರ್ತವ್ಯಕ್ಕೆ ಅನಧಿಕೃತಕವಾಗಿ ಗೈರಾಗುವುದು, ಕರ್ತವ್ಯದ ವೇಳೆ ಮದ್ಯ ಸೇವಿಸಿ ಪ್ರಾಥಮಿಕ ಆರೋಗ್ಯಾಧಿಕಾರಿ, ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಾ ಕರ್ತವ್ಯ ಲೋಪ ಎಸಗಿದ ಆರೋಪದಡಿ ಹಿರಿಯೂರು ತಾಲೂಕು ಯಲ್ಲದಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಾಧಿಕಾರಿ ಎಸ್. ಸಿದ್ದೇಶ್ವರ್ ಅವರನ್ನು ಮಂಗಳವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಸಂಬಂಧಿಸಿದ ಹಿರಿಯ ಅಧಿಕಾರಿಗಳು ನಡೆವಳಿಕೆ ಬದಲಿಸಿಕೊಳ್ಳುವಂತೆ ಮೌಖಿಕವಾಗಿ ಸೂಚಿಸಿದ್ದರು.ನೋಟಿಸ್‌ಗಳನ್ನೂ ನೀಡಿದ್ದರೂ. ಆದರೆ ತನ್ನ ನಡೆಯನ್ನು ತಿದ್ದಿಕೊಳ್ಳದ ಸಿದ್ದೇಶ್ವರ್ ವಿರುದ್ಧ ಶಿಸ್ತು ಕ್ರಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಶಿಫಾರಸು ಮಾ ಡಿದ್ದರು. ಇವರ ಮನವಿ ಆಧರಿಸಿ ಹಾಗೂ ಇಲಾಖೆ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.