ಬೀದರ್: ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ಮಂಜೂರು ಮಾಡಲಾದ ಸೇವಾಲಾಲ್ ಭವನಗಳನ್ನು ನಮಗೂ ಕೊಡಿ. ಕೇವಲ ಮಂತ್ರಿಗಳ ಕ್ಷೇತ್ರಕ್ಕೆ ಸೀಮಿತಗೊಳಿಸಿದರೆ ಹೇಗೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ ಪ್ರಶ್ನಿಸಿದರು.
ವಿಧಾನಸೌಧದಲ್ಲಿ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿ, ತಾಂಡಾ ಅಭಿವೃದ್ಧಿ ನಿಗಮದಿಂದ 2017-18ರಲ್ಲಿ 3, 2018-19 ಕೇವಲ 1 ಸೇವಾಲಾಲ್ ಭವನವನ್ನು ನನ್ನ ಕ್ಷೇತ್ರಕ್ಕೆ ಮಂಜೂರು ಮಾಡಲಾಗಿದೆ. ಆದರೆ 2019-20ರಲ್ಲಿ 18 ಸೇವಾಲಾಲ್ ಭವನಗಳನನ್ನು ಮಂತ್ರಿಗಳ ಕ್ಷೇತ್ರವಾದ ಔರಾದ್ ಗೆ ನೀಡಲಾಗಿದೆ. ಎಲ್ಲವನ್ನೂ ಅವರಿಗೆ ನೀಡಿದರೆ ಹೇಗೆ ? ನನ್ನ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಸಹ 18-20 ತಾಂಡಾಗಳಿವೆ. ನಮಗೂ ಸೇವಾಲಾಲ್ ಭವನ ನೀಡಬೇಕು ಎಂದು ಖಾಶೆಂಪುರ ಆಗ್ರಹಿಸಿದರು.