ಜಿಲ್ಲೆ

ಸೇವಾದಳದ ಕಾರ್ಯ ಶ್ಲಾಘನೀಯ:ಸಿ.ಎಂ. ಮಹಾಲಿಂಗಯ್ಯ ಅಭಿಮತ

Hassan - Ramesh H R

ಹಾಸನ: ಮಕ್ಕಳಲ್ಲಿ ಶಿಸ್ತಿನ ಮನೋಭಾವ ಬೆಳೆಸಲು ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜದ ಮಹತ್ವವನ್ನು ತಿಳಿಸುವ ಮೂಲಕ ಭಾರತ್ ಸೇವಾದಳ ಉತ್ತಮವಾದ ಕೆಲಸ ನಿರ್ವಹಿಸುತ್ತಾ ಬರುತ್ತಿದೆ ಎಂದು ಪದವಿಪೂರ್ವ ಕಾಲೇಜು ಉಪನಿರ್ದೇಶಕರಾದ ಸಿ.ಎಂ. ಮಹಾಲಿಂಗಯ್ಯ ಅಭಿಪ್ರಾಯಪಟ್ಟರ.
ನಗರದ ಎನ್.ಆರ್. ವೃತ್ತದ ಬಳಿ ಇರುವ ಸಂತ ಫಿಲೋಮಿನಾ ಕಾಲೇಜು ಸಭಾಂಗಣದಲ್ಲಿ ಭಾರತ ಸೇವಾದಳ ಮತ್ತು ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಇವರ ಸಹಯೋಗದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಭಾರತ ಸೇವಾದಳ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತ ಸೇವಾದಳದ ಚಟುವಟಿಕೆಗಳು ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ನಡೆಯುತ್ತಿವೆ. ಕಾಲೇಜುಗಳಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಾ ಕಾನೂನು ಜಾಗೃತಿ, ಆರೋಗ್ಯ ಅರಿವು ಮತ್ತು ಸಸಿ ನೆಡುವ ಕಾರ್ಯಕ್ರಮಗಳು, ರಾಷ್ಟ್ರಗೀತೆ, ರಾಷ್ಟ್ರಧ್ವಜ ಮಾಹಿತಿ ಕಾರ್ಯಾಗಾರವನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಸೇವಾದಳದ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾರತ ಸೇವಾದಳದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ಎಂ.ಕೆ. ಕಮಲ್ ಕುಮಾರ್, ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶಾಲಾ-ಕಾಲೇಜುಗಳಲ್ಲಿ ಘಟಕಗಳನ್ನು ನಡೆಸುತ್ತಿದ್ದು, ಮಕ್ಕಳಲ್ಲಿ ಉತ್ತಮವಾದ ಸಂಸ್ಕೃತಿ, ಸಂಸ್ಕಾರ ಕಲಿಸುವ, ಸಮಯ ಪ್ರಜ್ಞೆ, ರಾಷ್ಟ್ರ ಅಭಿಮಾನವನ್ನು ಮೂಡಿಸುವ ಸಲುವಾಗಿ ಮಕ್ಕಳಿಗೆ ಸೇವಾದಳದ ತತ್ವಗಳನ್ನು ಹೇಳಿಕೊಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಸುರೇಂದ್ರ ಕುಮಾರ್, ವಲಯ ಸಂಘಟಕರಾದ ವಿ.ಎಸ್. ರಾಣಿ, ಬಿ.ಎನ್. ಮಹೇಶ್, ಕಾರ್ಯದರ್ಶಿ ಟಿ.ಎಸ್. ಕುಮಾರಸ್ವಾಮಿ, ಖಜಾಂಚಿ ಡಿ.ಕೆ. ಕುಮಾರಯ್ಯ, ನಿರ್ದೇಶಕ ಬಿ.ಆರ್. ದೇವರಾಜ್, ಹಿರಿಯ ಸದಸ್ಯ ಗಣಪತಿ, ಪ್ರಾಂಶುಪಾಲ ಸಂಘದ ಉಪಾಧ್ಯಕ್ಷರಾದ ಶೋಭಾ, ಸಂತ ಫಿಲೋಮಿನಾ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಜಸಿಂತಾ ಕೊರಿಯ, ಭಾರತ ಸೇವಾ ದಳದ ಕಾಲೇಜು ಶಾಖಾ ನಾಯಕ ಐಚನಹಳ್ಳಿ ಕೃಷ್ಣಪ್ಪ, ಮತ್ತು ಜಿಲ್ಲೆಯ ಸುಮಾರು 170ಕ್ಕೂ ಹೆಚ್ಚು ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪ ನಿರ್ದೇಶಕರ ಕಚೇರಿಯ ಅಧಿಕಾರಿ ವೃಂದದವರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.