ಚಾಮರಾಜನಗರ: ಜಿಲ್ಲೆಯಲ್ಲಿ ರೋಟರಿ ಮತ್ತು ರೋಟರಿ ಸಿಲ್ಕ್ ಬಹಳಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದು, ಇದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ರೋಟರಿ ನಿಯೋಜಿತ ಗೌರ‌್ನರ್ ಎಸ್.ಸೋಮಶೇಖರ್ ಹೇಳಿದರು.
ನಗರದ ಮಾಂಗಲ್ಯ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ನಡೆದ ವಿವಿಧ ಸೇವಾ ಕಾರ್ಯಗಳು, ಸಾಧಕರಿಗೆ ಸನ್ಮಾನ, ನೂತನ ಪದಾಧಿಕಾರಿಗಳ ಪದವಿ ಪ್ರಧಾನ ಸಮಾರಂಭ ಹಾಗೂ ಪತ್ರಿಭಾ ಪುರಸ್ಕಾರ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.
ರೋಟರಿ ಸಂಸ್ಥೆಯು ಸೇವೆಯ ಆಧಾರದಲ್ಲಿ ಜನರು ಗುರುತಿಸುವಂತಾಗಿದೆ. ರೋಟರಿ ಹಾಗೂ ರೋಟರಿ ಸಿಲ್ಕ್‌ಸಿಟಿ ಜಿಲ್ಲಾ ಕೇಂದ್ರದಲ್ಲಿ ಬಹಳಷ್ಟ ಜನಪರ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಮೆಚ್ಚುಗೆ ಪಾತ್ರವಾಗಿದೆ. ರೋಟರಿ ಸಿಲ್ಕ್‌ಸಿಟಿ ಬಹಳ ಉತ್ತಮ ಯುವ ಪಡೆಯನ್ನು ಹೊಂದಿದೆ. ಕಾಡಂಚಿನ ಮೂಕನಪಾಳ್ಯ ಶಾಲೆಯನ್ನು ಅಭಿವೃದ್ದಿಪಡಿಸುವ ಮೂಲಕ ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಹಾರ ಮೇಳ, ರಕ್ತದಾನ ಶಿಬಿರ, ಸ್ವಚ್ಚತಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರದಲ್ಲಿ ಜಾಗೃತಿ ಮೂಡಿಸಿದ್ದಾರೆ. ನೂತನ ಅಧ್ಯಕ್ಷ ಶಮಿತ್‌ಕುಮಾರ್ ನೇತೃತ್ವದ ತಂಡವು ಇನ್ನು ಹೆಚ್ಚಿನ ಸಾಧನೆಯನ್ನು ಮಾಡಿ, ಪ್ರಶಂಸೆಯನ್ನು ಪಡೆದುಕೊಳ್ಳಲಿ ಎಂದರು.
ರೋಟರಿ ಸಿಲ್ಕ್‌ಸಿಟಿ ನೂತನ ಅಧ್ಯಕ್ಷ ಶಮಿತ್‌ಕುಮಾರ್ ಮಾತನಾಡಿ, ಈ ಹಿಂದೆ ಕಾರ್ಯದರ್ಶಿಯಾಗಿ ಒಳ್ಳೆಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದೇವು. ಈ ವರ್ಷದ ಜಿಲ್ಲಾ ಪ್ರೋಜೆಕ್ಟ್‌ನಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯ ಬಗ್ಗೆ ಅರಿವು ಮೂಡುವುದು, ಅಂಗನವಾಡಿಗಳ ಅಭಿವೃದ್ದಿ, ಮಕ್ಕಳಿಗೆ ಆಟಿಕೆ ಸಾಮಾಗ್ರಿಗಳ ಕೊಡುಗೆ, ರಕ್ತದಾನ ಶಿಬಿರ, ಕಣ್ಣಿನ ಉಚಿತ ತಪಾಸಣೆ ಶಿಬಿರ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು. ಇನ್ನು ಹೆಚ್ಚಿನ ರೀತಿಯಲ್ಲಿ ರೋಟರಿ ಪಬ್ಲಿಕ್ ಇಮೇಜ್ ಹೆಚ್ಚಿಸಲು ಶ್ರಮಿಸುವುದಾಗಿ ತಿಳಿಸಿದರು.
ರೋಟರಿ ಜಿಲ್ಲಾ ಸಹಾಯಕ ಗೌರ್ರರ್ ದೊಡ್ಡರಾಯಪೇಟೆ ಗಿರೀಶ್ ಮಾತನಾಡಿ, ರೋಟರಿ ಸಿಲ್ಕ್‌ಸಿಟಿಯಲ್ಲಿ ಯುವ ಪಡೆಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಉದ್ಯಮದ ತೆಗೆ ಸಾಮಾಜಿಕ ಸೇವೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಉತ್ತಮ ಸಮಾಜ ನಿರ್ಮಾಣ ಮಾಡಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೋಟರಿ ಸಿಲ್ಕ್‌ಸಿಟಿವತಿಯಿಂದ ವರ್ಷದ ಸಿಲ್ಕ್‌ಸಿಟಿ ಅವಾರ್ಡ್ ಅನ್ನು ಅಂಕಶೆಟ್ಟಿಪುರದ ಪಿ. ಮರಿಸ್ವಾಮಿ ಅವರಿಗೆ ನೀಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕುರುಬೂರು ಚೈತ್ರಾ, ಆಲೂರಿನ ಅಭೀಷೇಕ್, ಪರಿಸರ ಪ್ರೇಮಿ ವೆಂಕಟೇಶ್, ಪೌರಕಾರ್ಮಿಕರಾದ ಪಾಪಕ್ಕಿ, ರುಕ್ಮಿಣಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಲಯ ಪ್ರತಿನಿಧಿ ಆರ್. ಯೊಗರಾಜು ನಿಗರ್ಮಿತ ಅಧ್ಯಕ್ಷ ಮಾಣಿಕಚಂದ್ ಸೀರ್ವಿ, ನೂತನ ಕಾರ್ಯದರ್ಶಿ ಜಿ. ಸಂತೋಷಕುಮಾರ್, ಡಿ.ಪಿ.ವಿಶ್ವಾಸ್, ಮರಿಯಾಲ ಮುರುಗೇಂದ್ರಸ್ವಾಮಿ, ಶ್ರೀನಿಧಿ, ಬಸವರಾಜು, ಪ್ರಶಾಂತ್, ಅಜಯ್, ಶಾಂತಿಪ್ರಸಾದ್ ಇತರರು ಭಾಗವಹಿಸಿದ್ದರು.