ಜಿಲ್ಲೆ

ಸೇವಾಕರ್ತರಾಗಿ ಕಾರ್ಯ ನಿರ್ವಹಣೆ

ಹುಬ್ಬಳ್ಳಿ: ಲಾಕ್​ಡೌನ್ ಅವಧಿಯಲ್ಲಿ ವಲಸೆ ಕಾರ್ವಿುಕರಿಗೆ, ಬಡವರಿಗೆ, ಪ್ರಯಾಣಿಕರಿಗೆ, ಇತರರಿಗೆ ನಿರಂತರವಾಗಿ ಊಟ-ಉಪಾಹಾರ ಪೂರೈಸಿದ 6 ಸೇನಾನಿಗಳನ್ನು ದೇಶಪಾಂಡೆ ನಗರದ ಗುರುದ್ವಾರದಲ್ಲಿ ಗುರುವಾರ ಸನ್ಮಾನಿಸಲಾಯಿತು.

ಗುರುನಾನಕ್ ಮಿಷನ್ ಟ್ರಸ್ಟ್​ನ ಅಧ್ಯಕ್ಷ ಜಸ್ಮೇಲ್​ಸಿಂಗ್ ಗಿಲ್, ಕಾರ್ಯದರ್ಶಿ ಜಸವೀರಸಿಂಗ್ ಕೋನ್ಸಲ್, ಉಪಾಧ್ಯಕ್ಷ ಪ್ರೀತಂ ಸಿಂಗ್ ಹುಂಡಲ್, ಸಂಜೀವ ಭಾಟಿಯಾ, ಸುಭಾಸ ಜೋತವಾನಿ ಹಾಗೂ ಸುರೇಶ ಬಾಫಣಾ ಅವರನ್ನು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಸನ್ಮಾನಿಸಿದರು. ಪ್ರಕಾಶ ಬಾಫಣಾ, ಪ್ರವೀಣಕುಮಾರ ಜೈನ್, ಇತರರು ಕಾರ್ಯಕ್ರಮ ಆಯೋಜಿಸಿದ್ದರು.

ಲಾಕ್​ಡೌನ್ ಘೊಷಣೆಯಾದ ಕೂಡಲೆ ಮೊದಲು ಅಂದಾಜು 500 ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗಿತ್ತು. ಬಳಿಕ ಅಗತ್ಯ ಕಂಡು ಬಂದು ಬೇಯಿಸಿದ ಆಹಾರವನ್ನು ನಿರಂತರವಾಗಿ ಪೂರೈಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲುಕಿಕೊಂಡ ಲಾರಿ ಚಾಲಕರು, ವಸತಿ ನಿಲಯದಲ್ಲಿ ತಂಗಿದ್ದ ವಿದ್ಯಾರ್ಥಿಗಳು, ವಲಸೆ ಕಾರ್ವಿುಕರು, ಹೋಟೆಲ್​ನಲ್ಲಿ ಕ್ವಾರಂಟೈನ್​ನಲ್ಲಿದ್ದ ಜನರಿಗೆ ಊಟ ಹಾಗೂ ಉಪಾಹಾರದ ಪ್ಯಾಕೇಟ್ ವಿತರಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 1.81 ಲಕ್ಷ ಊಟದ ಪ್ಯಾಕೆಟ್ ಹಾಗೂ ಇದೇ ಅವಧಿಯಲ್ಲಿ 150 ಜನರಿಗೆ ಔಷಧ ವಿತರಿಸಿದ್ದೇವೆ ಎಂದು ಟ್ರಸ್ಟ್ ತಿಳಿಸಿದೆ.

ಈ ಕಾರ್ಯದಲ್ಲಿ ದೇಣಿಗೆ ನೀಡಿದ ಹಾಗೂ ಸೇವಾಕರ್ತರಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ಪ್ರವೀಣ ಪವಾರ, ಗಿರೀಶ ಜಕರಡ್ಡಿ, ಬಿಜೆಪಿ ವಕ್ತಾರ ರವಿ ನಾಯ್ಕ, ಇತರರು ಇದ್ದರು.

ಟ್ರಸ್ಟ್​ನ ಸೇವಾ ಕಾರ್ಯಕ್ಕೆ ಮಹೇಶ ಟೆಂಗಿನಕಾಯಿ ಮಿತ್ರ ಬಳಗದವರು 21000 ರೂ. ದೇಣಿಗೆ ನೀಡಿದರು. ಟ್ರಸ್ಟ್ ಈ ಮೊತ್ತವನ್ನು ಕೋವಿಡ್ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದೆ.

EndFragment