ಬಾಗೂರು ಹೋಬಳಿ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಲಯನ್ಸ್ ಕ್ಲಬ್ ಅನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ಲಯನ್ಸ್ ಕ್ಲಬ್ ನ ಪ್ರಮುಖರಾದ ಸಂಜಿತ್ ಶೆಟ್ಟಿ, ಭಾರತಿ, ಪ್ರಗತಿಶೆಟ್ಟಿ, ಚಂದ್ರೇಗೌಡ, ಬಾಗೂರು ಶಿವಣ್ಣ, ಬಸವರಾಜು ಇದ್ದರು. 
ಜಿಲ್ಲೆ

ಸೇವಾ ಮನೋಭಾವದಿಂದ ಬಡವರ ಕೆಲಸ ನಿರ್ವಹಣೆ

Hassan

ಬಾಗೂರು: ಸೇವಾ ಮನೋಭಾವನೆಯಿಂದ ಕಷ್ಟದಲ್ಲಿರುವ ಬಡವರ ಕೆಲಸವನ್ನು ಲಯನ್ಸ್ ಕ್ಲಬ್ ನಿರ್ವಹಿಸುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಶ್ಲಾಘಿಸಿದರು.

ಬಾಗೂರು ಹೋಬಳಿ ಕೇಂದ್ರದಲ್ಲಿ ಮಂಗಳವಾರ ನೂತನ ಲಯನ್ಸ್ ಕ್ಲಬ್ ಉದ್ಘಾಟಿಸಿ ಮಾತನಾಡಿದ, ಲಯನ್ಸ್ ಕ್ಲಬ್ ಇಡೀ ವಿಶ್ವದ ಅನೇಕ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಮಾಜದಲ್ಲಿ ಇರುವ ಬಡವರು, ವಿದ್ಯಾರ್ಥಿಗಳು, ಆರೋಗ್ಯ ಕ್ಷೇತ್ರಕ್ಕೆ, ಹೆಚ್ಚಿನ ಸಹಾಯ ಸಹಕಾರ ನೀಡುತ್ತಿರುವುದು ಶ್ಲಾಘನೀಯ ವಾದದ್ದು ಹೋಬಳಿ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಲಯನ್ಸ್ ಕ್ಲಬ್ ಸಮಾಜಮುಖಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡುವಂತೆ ತಿಳಿಸಿದರು.

ತಾಲೂಕಿನ ಇನ್ನು ಉಳಿದ ಹೋಬಳಿ ಕೇಂದ್ರಗಳಲ್ಲೂ ಲಯನ್ಸ್ ಕ್ಲಬ್ ಅಸ್ತಿತ್ವಕ್ಕೆ ಬರಲಿ ಎಂದರು. ಜಿಲ್ಲಾ ಪ್ರಾಂತಪಾಲ ಲಯನ್ಸ್ ಕ್ಲಬ್‌ನ ಸಂಜಿತ್ ಶೆಟ್ಟಿ ಮಾತನಾಡಿ, ವಿಶ್ವದ 220 ದೇಶಗಳಲ್ಲಿ ಲಯನ್ಸ್ ಕ್ಲಬ್ ಕಾರ್ಯನಿರ್ವಹಿಸುತ್ತಿದ್ದು ಸುಮಾರು 15 ಲಕ್ಷ ಸದಸ್ಯರನ್ನು ಹೊಂದಿದೆ ಲಯನ್ಸ್ ಕ್ಲಬ್ ಗೆ 106 ವರ್ಷಗಳ ಇತಿಹಾಸವಿದ್ದು, ಸಾಮಾಜಿಕ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಬಡವರಿಗೆ ಸಹಾಯ ಮಾಡುವ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಜಿಲ್ಲಾ ಉಪ ಪ್ರಾಂತಪಾಲ ಭಾರತಿ ಬಿ ಎಂ., ಪ್ರಾಂತೀಯ ನಿರ್ದೇಶಕ ಎಚ್.ಆರ್.ಚಂದ್ರೇಗೌಡ, ಜಿಲ್ಲಾ ಮಹಿಳಾ ಪ್ರತಿನಿಧಿ ಪ್ರಗತಿ ಶೆಟ್ಟಿ, ಜಿಲ್ಲಾಧ್ಯಕ್ಷ ಸೋಮಶೇಖರ್, ಬಾಗೂರು ನೂತನ ಲಯನ್ಸ್ ಕ್ಲಬ್ ಅಧ್ಯಕ್ಷ ಬಾಗೂರು ಶಿವಣ್ಣ, ಕಾರ್ಯದರ್ಶಿ ಓಬಳಾಪುರ ಬಸವರಾಜು, ಖಜಾಂಚಿ ತಿಮ್ಮೇಗೌಡ್ರು, ಲಯನ್ಸ್ ಕ್ಲಬ್ ನ ಪ್ರಮುಖರಾದ ವಸಂತ್ ಕುಮಾರ್, ಅಶೋಕ್, ಪ್ರಕಾಶ್, ಡಾ.ಮಹೇಶ್, ಗಿರೀಶ, ಕೆನರಾ ಬ್ಯಾಂಕ್ ಮಂಜೇಗೌಡ, ಮಲ್ಲೇಶ್ ಗೌಡ್ರು, ಮೂಡನಹಳ್ಳಿ ಚಂದ್ರಣ್ಣ, ಕೇಶವ್, ವಸಂತ್ ಕುಮಾರ್ ಶೆಟ್ಟಿ, ಸೋಮಣ್ಣ, ಅಣ್ಣೇಗೌಡ, ದಿಲೀಪ್, ಮಂಜೇಗೌಡ ಮತ್ತಿತರರಿದ್ದರು.