ಚಾಮರಾಜನಗರ: ನಗರದ ಸೇವಾ ಭಾರತಿ ಪಬ್ಲಿಕ್ ಶಾಲೆಯ ವಿದ್ಯಾರ್ತಿ ಬಿ.ಧನುಷ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪ್ರಾಂತೀಯ ಹಾಗೂ ರಾಜ್ಯಮಟ್ಟದ ಡಿಸ್ಕಸ್ ಥ್ರೋ - ಅಥ್ಲೆಟಿಕ್ ವಿಭಾಗದಲ್ಲಿ ಗೆಲುವು ಸಾಧಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ವಿದ್ಯಾರ್ಥಿಯನ್ನು ಸೇವಾ ಭಾರತಿ ಆಡಳಿತ ಮಂಡಳಿ , ಪ್ರಾಂಶುಪಾಲರು, ಶಿಕ್ಷಕ ವೃಂದ ಹಾಗೂ ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.