ನಂಜನಗೂಡು: ತಾಲೂಕಿನ ಹೆಡತಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಕನ್ನಡ ಶಿಕ್ಷಕಿ ರೇಣುಕಾ ಅವರನ್ನು ಗ್ರಾಮಸ್ಥರು ಹಾಗೂ ಶಿಕ್ಷಕರು ಮಂಗಳವಾರ ಸನ್ಮಾನಿಸಿ ಬೀಳ್ಕೊಟ್ಟರು.
ಗ್ರಾಮದ ಮುಖಂಡ ಮಹದೇವ ನಾಯಕ ಮಾತನಾಡಿ, ಶಿಕ್ಷಕಿ ರೇಣುಕಾ ಅವರು ಇದೇ ಗ್ರಾಮದವರಾಗಿದ್ದು ಶಾಲೆ ಸಮಯ ಮುಗಿದ ನಂತರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಂಜೆ ವೇಳೆ ಮನೆಯಲ್ಲಿ ಉಚಿತವಾಗಿ ಪಾಠ ಮಾಡುತ್ತಿದ್ದರು. ಇಂತಹ ಶಿಕ್ಷಕರನ್ನು ಕಂಡರೆ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ನಮ್ಮ ಸರ್ಕಾರಿ ಶಾಲೆಗಳಲ್ಲಿ ಇಂತಹ ಶಿಕ್ಷಕಿಯರು ಸಿಕ್ಕಿದ್ದು ನಮ್ಮ ಪುಣ್ಯ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ವೃಷಭೇಂದ್ರಪ್ಪ, ಮುಖ್ಯ ಶಿಕ್ಷಕ ಬೆಳ್ಳೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ಮಹೇಶ, ಮುಖಂಡರಾದ ಪುಟ್ಟರಾಜು, ಕೃಷ್ಣನಾಯಕ, ಮಹಾದೇವ ಸ್ವಾಮಿ, ಮಹೇಶ, ಹನುಮಂತ ನಾಯಕ, ರೀತ, ಮಂಜು, ಹೇಮಾವತಿ, ಮಾದೇವಸ್ವಾಮಿ, ಶಿಕ್ಷಕರು, ಗ್ರಾಮಸ್ಥರು ಹಾಜರಿದ್ದರು.