ಜಿಲ್ಲೆ

ಸೇತುವೆಗೆ ಡಿಕ್ಕಿ, ಬೈಕ್​ ಸವಾರ ಸಾವು

ಮೂಡಲಗಿ: ಪಟ್ಟಣದಿಂದ ಸುಣಧೋಳಿ ಗ್ರಾಮದ ಕಡೆಗೆ ತೆರಳುತ್ತಿದ್ದ ಬೆಕ್​ ಸೇತುವೆಗೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟ ಟನೆ ಗುರುವಾರ ನಡೆದಿದೆ. ತಾಲೂಕಿನ ನಾಗನೂರ ಪಟ್ಟಣದ ನಿವಾಸಿ ಹಣಮಂತ ನಾಯಕ (26) ಮೃತ. ಹಿಂಬದಿ ಸವಾರ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಟನಾ ಸ್ಥಳಕ್ಕೆ ಮೂಡಲಗಿ ಪಿಎಸ್​ಐ ರಾಜು ಪೂಜೇರಿ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.