ಜಿಲ್ಲೆ

ಸೇತುವೆಗೆ ಕೂಡುವ ರಸ್ತೆ ಕುಸಿತ

ಮುಂಡರಗಿ: ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನಿಂದ ಗದಗ ಜಿಲ್ಲೆ ಮುಂಡರಗಿ ತಾಲೂಕಿಗೆ ಸಂಪರ್ಕ ಕಲ್ಪಿಸುವ ತಾಲೂಕಿನ ಕೊರ್ಲಹಳ್ಳಿ ಸಮೀಪದ ಸೇತುವೆಗೆ ಕೂಡುವ ರಸ್ತೆ ಬುಧವಾರ ಬೆಳಗಿನ ಜಾವ ಕುಸಿದಿದೆ. ಸೇತುವೆಗೆ ಕೂಡುವ ಈ ರಸ್ತೆ ಅತಿಯಾದ ಮಳೆಗೆ ತೇವಾಂಶ ಹೆಚ್ಚಾಗಿ ಕುಸಿದಿದೆ. ಇದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು. ರಸ್ತೆಯ ಕುಸಿತ ಗಮನಿಸದ ಕಾರೊಂದು ಬೆಳಗಿನ ಜಾವ ಅಪಘಾತಕ್ಕೀಡಾಗಿದೆ. ಆದರೆ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕಾಗಮಿಸಿದ ಕೆಆರ್​ಡಿಸಿಎಲ್ ಅಧಿಕಾರಿಗಳು, ಸಿಬ್ಬಂದಿ ಪರಿಶೀಲಿಸಿ ದುರಸ್ತಿ ಕಾರ್ಯ ಕೈಗೊಂಡರು. ಈ ಕುರಿತು ಪ್ರತಿಕ್ರಿಯಿಸಿದ ಕೆಆರ್​ಡಿಸಿಎಲ್ ಇಇ ವಿ.ವಿ. ಅಂಗಡಿ ಅವರು, ಅತಿಯಾದ ಮಳೆಯಿಂದಾಗಿ ಸೇತುವೆಗೆ ಕೂಡುವ ರಸ್ತೆ ಕುಸಿದಿದೆ. ತಕ್ಷಣ ಸಿಬ್ಬಂದಿ ಸ್ಥಳಕ್ಕೆ ತೆರಳಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ ಎಂದು ತಿಳಿಸಿದರು.

EndFragment