ಜಿಲ್ಲೆ

ಸೇತುವೆ ಮೇಲೆ ಲಘು ವಾಹನಗಳ ಸಂಚಾರ ಆರಂಭ

ಕಂಪ್ಲಿ: ತುಂಗಭದ್ರಾ ಜಲಾಶಯದಿಮದ ನದಿಗೆ ಹರಿಸುವ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಸೇತುವೆ ಮೇಲೆ ಪಾದಚಾರಿಗಳು ಮತ್ತು ಲಘು ವಾಹನಗಳ ಸಂಚಾರಕ್ಕೆ ಬುಧವಾರ ಮಧ್ಯಾಹ್ನದಿಂದ ಅನುಮತಿ ನೀಡಲಾಯಿತು.

ಬುಧವಾರ ಬೆಳಗ್ಗೆ ನದಿಯಲ್ಲಿ 80 ಸಾವಿರ ಕ್ಯೂಸೆಕ್ ನೀರಿನ ಹರಿವಿದ್ದು, ಸೇತುವೆಗಿಂತ ಕೆಳಮಟ್ಟದಲ್ಲಿ ನೀರು ಹರಿಯುತ್ತಿದೆ. ಎರಡು ದಿನ ಸೇತುವೆ ನೀರಲ್ಲಿ ಮುಳುಗಿತ್ತು. ಸೇತುವೆಯ ರಕ್ಷಣಾ ಕಂಬಿಗಳಿಗೆ ಸಿಲುಕಿದ್ದ ಜಲಸಸ್ಯಗಳನ್ನು ಪೌರ ಕಾರ್ಮಿಕರು ಮತ್ತು ಗಂಗಾವತಿ ಪಿಡಬ್ಲುೃಡಿ ಸಿಬ್ಬಂದಿ ತೆರವುಗೊಳಿಸಿ ಸೇತುವೆ ಮೇಲೆ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.

ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಸೇತುವೆ ಸ್ವಚ್ಛತಾ ಕಾರ್ಯ ವೀಕ್ಷಿಸಿದರು. ಸೇತುವೆ ಪರೀಕ್ಷಿಸಿದ ನಂತರ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಗಂಗಾವತಿ ಪಿಡಬ್ಲುೃಡಿ ಎಇಇ ಜೆ.ವಿಶ್ವನಾಥ ಮಾಹಿತಿ ನೀಡಿದರು.