ಜಿಲ್ಲೆ

ಸೇತುವೆ ಬಳಿ ಕಾಣಿಸಿಕೊಂಡ ಹೆಬ್ಬಾವು

ಶಿವಶಂಕರ್ ಎಂ. ಹೆಬ್ಬಳ್ಳ

ಕೊಳ್ಳೇಗಾಲ : ತಾಲೂಕಿನ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಸಮೀಪದ ಕಾವೇರಿ ನದಿಯ ಹೊಸ ಸೇತುವೆ ಮೇಲೆ ಬುಧವಾರ ಹೆಬ್ಬಾವು ಕಾಣಿಸಿಕೊಂಡಿದೆ.

ಸತ್ತೇಗಾಲ ಹ್ಯಾಂಡ್ ಪೋಸ್ಟ್ ಸಮೀಪದ ಕಾವೇರಿ ನದಿಯ ಸೇತುವೆ ಮೇಲೆ ಹೆಬ್ಬಾವು ಮಲಗಿರುವುದು.

ಸೇತುವೆ ಮೇಲೆ ಸಂಚರಿಸುವ ಮೂಲಕ ವಾಹನ ಸವಾರರಿಗೆ ಹೆಬ್ಬಾವು ಪ್ರತ್ಯಕ್ಷವಾಗಿದ್ದು. ಈ ವೇಳೆ ವಾಹನಗಳ ಬೆಳಕನ್ನು ಬಿಟ್ಟು ದಾರಿ ಹೋಕರು ಹಾವನ್ನು ವೀಕ್ಷಣೆ ಮಾಡುತ್ತಿದ್ದರು. ಇದ್ದರಿಂದ ಗಾಬರಿಗೊಂಡ ಹಾವು ರಸ್ತೆ ಬದಿಯಲ್ಲಿ ಮಲಗಿದ್ದು, ಭಾರಿ ವಾಹನಗಳು ಸೇತುವೆ ಮೇಲೆ ಸಂಚರಿಸುವ ಶಬ್ದಕ್ಕೆ ಬಾಯ್ತೆರೆದು ಪ್ರತಿಕ್ರಿಯಿಸುತ್ತಿತ್ತು. ನಂತರ, ಸ್ಥಳೀಯರು ಮಾಹಿತಿ ನೀಡಿದ ಬಳಿಕ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಸ್ತೆಯಿಂದ ಹಾವನ್ನು ಕೆಳಗೆ ಇಳಿಸಿದರು.