ಕಳಸ: ಸಂಸೆ-ಕುದುರೆಮುಖ ರಾಜ್ಯ ಹೆದ್ದಾರಿಯ ಸಂಸೆಯಲ್ಲಿ ಸೋಮಾವತಿ ನದಿ ಸೇತುವೆಯ ಮುರಿದ ತಡೆಗೋಡೆಗಳಿಗೆ ಸಂಸೆ ಘಟಕದ ಶೌರ್ಯ ವಿಪತ್ತು ತಂಡದ ಸದಸ್ಯರು ಬಿದಿರಿನ ಬೊಂಬುಗಳನ್ನು ಕಟ್ಟಿದ್ದಾರೆ.
2019ರಲ್ಲಿ ಮಹಾಮಳೆಗೆ ಸೇತುವೆ ಮೇಲೆ ನೀರು ಹರಿದು ತಡೆಗೋಡೆಗಳು ತುಂಡಾಗಿ ಸೇತುವೆ ಶಿಥಿಲಾವಸ್ಥೆ ತಲುಪಿತ್ತು. ರಾಜ್ಯ ಹೆದ್ದಾರಿಯಾಗಿದ್ದರೂ ಸೇತುವೆ ಸರಿಪಡಿಸಲು ಪಿಡಬ್ಲುೃಡಿ ಮನಸ್ಸು ಮಾಡಲಿಲ್ಲ. ಸೇತುವೆಗೆ ತಡೆಗೋಡೆ ಇಲ್ಲದೆ ಸಾಕಷ್ಟು ಜಾನುವಾರುಗಳು ನದಿಗೆ ಬೀಳುತ್ತಿದ್ದವು. ಶಾಲಾ ಮಕ್ಕಳು ಇದೇ ಸೇತುವೆ ಮೇಲೆ ಸಂಚರಿಸುತ್ತಾರೆ. ಮಕ್ಕಳು ಸೇತುವೆ ಮೇಲೆ ನಿಂತು ಇಣುಕಿ ನದಿಯನ್ನು ನೋಡುತ್ತಾರೆ. ಇದರಿಂದ ಅನಾಹುತ ಸಂಭವಿಸುವ ಸಾಧ್ಯತೆ ಇದ್ದುದರಿಂದ ಶೌರ್ಯ ವಿಪತ್ತು ತಂಡದ ಸದಸ್ಯರು, ಆಟೋ ಚಾಲಕರು ಹಾಗೂ ಗ್ರಾಮಸ್ಥರು ಸೇರಿ ಬಿದಿರಿನ ಬೊಂಬುಗಳನ್ನು ಕಟ್ಟಿದ್ದಾರೆ.
ದುರಸ್ತಿ ಕಾರ್ಯದಲ್ಲಿ ಶೌರ್ಯ ವಿಪತ್ತು ಸಂಸೆ ಘಟಕದ ಸದಸ್ಯರಾದ ವಿನುತಾ, ಸಂಪತ್, ಹೆರಾಲ್ಡ್, ಅಶ್ವಿನಿ, ಶಿವಕುಮಾರ್, ಆಟೋ ಚಾಲಕರು, ಗ್ರಾಮಸ್ಥರು ಇದ್ದರು.