ಜಿಲ್ಲೆ

ಸೇಡಂ: ರಸ್ತೆ ಮಧ್ಯೆ ಕೈಕೊಟ್ಟ ಸಾರಿಗೆ ಬಸ್

ಸೇಡಂ: ಪಟ್ಟಣದಿಂದ ಗ್ರಾಮೀಣ ಪ್ರದೇಶಕ್ಕೆ ತೆರಳುತ್ತಿದ್ದ ಬಸ್‌ನ ಟೈರ್ ಒಡೆದು ಪ್ರಯಾಣಿಕರು ಪರದಾಡಿದ ಪ್ರಸಂಗ ಶುಕ್ರವಾರ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸೇಡಂ-ಹಾಬಾಳ(ಟಿ) ಬಸ್‌ನ ಟೈರ್ ಬ್ಲಾಸ್ಟ್ ಆಗಿದೆ. ನಿತ್ಯ ಸಂಜೆ ಸೇಡಂನಿAದ ಹಾಬಾಳಕ್ಕೆ ಬಸ್ ಸಂಚರಿಸುತ್ತದೆ. ಆದರೆ ಹಳೆಯ ಬಸ್ ಹಾಗೂ ಹೆಚ್ಚಿನ ಪ್ರಯಾಣಿಕರು ಹತ್ತಿದ್ದರಿಂದ ಟೈರ್ ಬ್ಲಾಸ್ಟ್ ಆಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಕೆಲ ಮಕ್ಕಳು ಕೆಳಗೆ ಬೀಳುತ್ತಿದ್ದರು. ಆದರೆ ಪ್ರಯಾಣಿಕರು ಅವರನ್ನು ರಕ್ಷಿಸಿದರು. ಕೊನೆಗೆ ಇನ್ನೊಂದು ಬಸ್ ಮೂಲಕ ಎಲ್ಲರೂ ಗ್ರಾಮಗಳಿಗೆ ತಲುಪಿದರು.

ಸೇಡಂ ತಾಲೂಕಿನ ಹಳ್ಳಿಗಳಿಗೆ ಹಳೆಯ ಬಸ್‌ಗಳೇ ಹೆಚ್ಚು ಸಂಚರಿಸುತ್ತಿದ್ದು, ನಿರಂತರ ಸಮಸ್ಯೆ ಆಗುತ್ತಿದೆ. ಅಲ್ಲದೆ ಹೆಚ್ಚಿನ ಬಸ್‌ಗಳಿಲ್ಲದೆ ಪ್ರಯಾಣಿಕರು ಅನಿವಾರ್ಯವಾಗಿ ಒಂದೇ ಬಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವAತ ಪರಿಸ್ಥಿತಿ ಇದೆ. ಈಗಲಾದರೂ ಸಂಬAಧಿತ ಅಧಿಕಾರಿಗಳು ಗಮನಹರಿಸಿ ಹೆಚ್ಚಿನ ಬಸ್‌ಗಳನ್ನು ಓಡಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.