ಜಿಲ್ಲೆ

ಸೆಸ್ಕ್ ನೂತನ ಕಚೇರಿ ಕಟ್ಟಡ ಉದ್ಘಾಟನೆ

ಹುಣಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ರತ್ನಪುರಿ ಶಾಖೆಯ ನೂತನ ಕಚೇರಿ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಲಾಯಿತು.

ಹುಣಸೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಗದೀಶ್ ಮಾತನಾಡಿ, ರತ್ನಪುರಿ ಗ್ರಾಮದಲ್ಲಿ ಈವರೆಗೆ ಬಾಡಿಗೆ ಕಟ್ಟಡದಲ್ಲಿ ಶಾಖಾ ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಸಂಸ್ಥೆ ವತಿಯಿಂದ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಶಾಖೆಯ ವ್ಯಾಪ್ತಿಯಲ್ಲಿ ರತ್ನಪುರಿ ಗ್ರಾಮ ಸೇರಿದಂತೆ ಆಸ್ಪತ್ರೆ ಕಾವಲ್, ಉದ್ದೂರು ಕಾವಲ್ ಮತ್ತು ಉಯಿಗೌಡನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಒಳಗೊಂಡಿವೆ. ಬೇಸಿಗೆ ಆರಂಭಗೊಂಡಿದ್ದು ಈವರೆಗೆ ತಾಲೂಕಿನಲ್ಲಿ ವಿದ್ಯುತ್ ಪರಿವರ್ತಕಗಳ(ಟಿಸಿ) ಕೊರತೆ ಎದುರಾಗಿಲ್ಲ. ಮುಂದಿನ ದಿನಗಳಲ್ಲಿ ಅಂತಹ ಪರಿಸ್ಥಿತಿ ಬಂದಲ್ಲಿ ಎದುರಿಸಲು, ರೈತರಿಗೆ ಯಾವುದೆ ತೊಂದರೆ ಉಂಟಾಗದಂತೆ ಕ್ರಮವಹಿಸಲು ನಿಗಮ ಮುನ್ನೆಚ್ಚರಿಕೆ ವಹಿಸಿದೆ. ಗೃಹಜ್ಯೋತಿ ಯೋಜನೆ ತಾಲೂಕಿನಲ್ಲಿ ಯಶಸ್ವಿಯಾಗಿ ಮುಂದುವರಿದಿದೆ ಎಂದರು.

ರತ್ನಪುರಿ ಶಾಖಾ ಇಂಜಿನಿಯರ್ ಶಶಿಧರ್, ಇಂಜಿನಿಯರ್‌ಗಳಾದ ಚನ್ನಕೇಶವ, ಎಸ್.ಸೋಮಶೇಖರ್, ರಮೇಶ್, ಕಾಂತರಾಜ್, ಶಂಕರ್, ವಿಜಯ್ ಕುಮಾರ್, ಮಲ್ಲಪ್ಪ, ದಿಲೀಪ್, ನೌಕರರ ಸಂಘದ ಪದಾಧಿಕಾರಿಗಳಾದ ಕೃಷ್ಣಕುಮಾರ್, ಜಗದೀಶ್, ಗುತ್ತಿಗೆದಾರರಾದ ಶ್ರೀಧರ್ ಸಿಂದೆ, ಶೇಖರ್, ವೃಷಭೇಂದ್ರ, ರಾಧಾಕೃಷ್ಣ ಉಪಸ್ಥಿತರಿದ್ದರು.