ಹನೂರಿನಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಯಗಳಿಸಿದ ಸೆಸ್ಕ್ ಇಲಾಖೆಯ ನೌಕರರಿಗೆ ನ್ಯಾಯಾಧೀಶ ರಘು ಬಹುಮಾನ ವಿತರಿಸಿದರು. ಜವಾದ್ ಆಹಮದ್, ಗಿರೀಶ್, ಆನಂದ್, ಮಹಾದೇಶ್, ಅಭಿಲಾಷ್ ಇತರರು ಇದ್ದರು.  
ಜಿಲ್ಲೆ

ಸೆಸ್ಕ್ ಇಲಾಖೆ ತಂಡಕ್ಕೆ ಜಯ

ಹನೂರು: ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ತಾಲೂಕು ಕ್ರಿಕೆಟ್ ಕ್ಲಬ್ ಹಾಗೂ ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ಕಾರಿ ನೌಕರರಿಗೆ ಆಯೋಜಿಸಿದ್ಧ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೆಸ್ಕ್ ಇಲಾಖೆ ತಂಡ ಜಯ ಗಳಿಸಿತು.

ಎರಡು ದಿನಗಳ ಕಾಲ ಆಯೋಜಿಸಿದ್ಧ ಪಂದ್ಯಾವಳಿಯಲ್ಲಿ ತಾಲೂಕಿನ ಅರಣ್ಯ, ಸೆಸ್ಕ್, ಗ್ರಾಮೀಣಾಭಿವೃದ್ಧಿ, ಕಂದಾಯ, ಪೊಲೀಸ್, ಮಾಧ್ಯಮ, ಅಗ್ನಿಶಾಮಕ ಹಾಗೂ ಶಿಕ್ಷಣ ಇಲಾಖೆಯ ನೌಕರರು ಭಾಗವಹಿಸಿದ್ದರು.

6 ಓವರ್‌ಗೆ ನಿಗದಿಗೊಳಿಸಿದ್ದ ಫೈನಲ್ ಪಂದ್ಯಾವಳಿಯಲ್ಲಿ ಸೆಸ್ಕ್ ಇಲಾಖೆ 4 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿ ಪ್ರಥಮ ಸ್ಥಾನ ಪಡೆದರೆ ಅರಣ್ಯ ಇಲಾಖೆ 6 ವಿಕೆಟ್ ಕಳೆದುಕೊಂಡು 18ರನ್ ಗಳಿಸುವ ಮೂಲಕ ದ್ವಿತೀಯ ಸ್ಥಾನ ಪಡೆಯಿತು. 2 ತಂಡಗಳಿಗೂ ಆಕರ್ಷಕ ಟ್ರೋಫಿ, ಪ್ರಮಾಣ ಪತ್ರ ಹಾಗೂ ಸಸಿಗಳನ್ನು ವಿತರಿಸಲಾಯಿತು. ಪಂದ್ಯದ ಪುರುಷೋತ್ತಮನಾಗಿ ಸೆಸ್ಕ್ ಇಲಾಖೆಯ ನೂತನ್, ಉತ್ತಮ ಬ್ಯಾಟ್ಸ್‌ಮನ್ ಆಗಿ ತಾಪಂನ ಮಂಜುನಾಥ್ ಹಾಗೂ ಉತ್ತಮ ಬೌಲರ್ ಆಗಿ ಅರಣ್ಯ ಇಲಾಖೆಯ ಮಲ್ಲಿಕಾರ್ಜುನ್ ಹೊರಹೊಮ್ಮಿದರು.

ಪಟ್ಟಣ ಸಂಚಾರಿ ನ್ಯಾಯಾಲಯದ ನ್ಯಾಯಾಧೀಶ ರಘು ಬಹುಮಾನ ವಿತರಣೆ ಮಾಡಿದರು. ತಾಪಂ ಮಾಜಿ ಸದಸ್ಯ ಜವಾದ್ ಆಹಮದ್, ಪಪಂ ಸದಸ್ಯರಾದ ಗಿರೀಶ್, ಆನಂದ್, ಸೆಸ್ಕ್ ಎಇ ರಂಗಸ್ವಾಮಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಮಹಾದೇಶ್, ಕ್ರಿಕೆಟ್ ಕ್ಲಬ್ ಅಧ್ಯಕ್ಷ ಅಭಿಲಾಷ್, ಗೌರಾವಾಧ್ಯಕ್ಷ ಮನ್ಸೂರ್, ಕಾರ್ಯದರ್ಶಿ ರಿಜ್ವಾನ್ ಇನ್ನಿತರರು ಇದ್ದರು.