ಜಿಲ್ಲೆ

ಸೆಮಿ ಫೈನಲ್ ಪಂದ್ಯಗಳು ಇಂದು

Kodagu

ನಾಪೋಕ್ಲು: ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶಿವಾಜಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅನುಪಮಾ ಸ್ಮರಣಾರ್ಥ ಆಯೋಜಿಸಿರುವ ಮುಕ್ತ ಹಾಕಿ ಪಂದ್ಯಾಟದಲ್ಲಿ ಶುಕ್ರವಾರ ನಾಲ್ಕು ತಂಡಗಳು ಗೆಲುವು ಸಾಧಿಸಿದವು.


ದಿನದ ಮೊದಲ ಪಂದ್ಯದಲ್ಲಿ ಬೇಂಗನಾಡು ಫೋನಿಕ್ಸ್ ಮಲ್ಮ ತಂಡದ ವಿರುದ್ಧ ಜಯಗಳಿಸಿತು. ಎರಡನೇ ಪಂದ್ಯದಲ್ಲಿ ಪೊದ್ದಮಾನಿ ತಂಡವು ಬೇಗೂರ್ ಇವೈಸಿ ತಂಡದ ವಿರುದ್ಧ ಶೂಟ್‌ಔಟ್‌ನಲ್ಲಿ ಸೋಲು ಅನುಭವಿಸಿತು. ಶಿವಾಜಿ ಎ ತಂಡವು 3-1 ಅಂತರದಿಂದ ಮೂರ್ನಾಡು ತಂಡದ ವಿರುದ್ಧ ಗೆಲುವು ಸಾಧಿಸಿತು. ನಾಲ್ಕನೇ ಪಂದ್ಯದಲ್ಲಿ ಡಾಲ್ಫಿನ್ಸ್ ತಂಡವು 3 ಗೋಲು ಗಳಿಸಿದರೆ ಅಂಜಿಕೇರಿ ನಾಟ್ ತಂಡವು ಎರಡು ಗೋಲು ಗಳಿಸಿ ಸೋಲು ಅನುಭವಿಸಿತು.


ಇಂದಿನ ಪಂದ್ಯಗಳು : ಬೆಳಗ್ಗೆ 10.30: ಬೇಂಗ್‌ನಾಡು-ಬೇಗೂರು, ಮಧ್ಯಾಹ್ನ 12: ಶಿವಾಜಿ-ಡಾಲ್ಫಿನ್ಸ್