ಜಿಲ್ಲೆ

ಸೆಂಟ್ರಲ್ ಸರ್ವಿಸ್‌ಗೆ ಎಸ್‌ಪಿ ಮೀನಾ ವರ್ಗ

ಚಿತ್ರದುರ್ಗ: ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರಕುಮಾರ್‌ಮೀನಾ ಅವರು ಕೇಂದ್ರ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಹುದ್ದೆ ಗೆ ವರ್ಗವಾಗಿದ್ದಾರೆ. ಈ ಸಂಬಂಧ ರಾಜ್ಯಸರ್ಕಾರದ ಮುಖ್ಯಕಾರ‌್ಯದರ್ಶಿ ಅವರಿಗೆ ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಪತ್ರ ಬರೆ ದಿದೆ.
ಮೀನಾ ಅವರು ಕಳೆದ ಆಗಸ್ಟ್ 26ರಂದು ಜಿಲ್ಲಾ ರಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 2012ರ ಬ್ಯಾಚ್ ಕರ್ನಾಟಕ ಕೇಡ ರ್ ಐಪಿಎಸ್ ಅಧಿಕಾರಿಯಾಗಿದ್ದ ಮೀನಾ,ಧಾರವಾಡ ಹಾಗೂ ಚಾಮರಾಜನಗರ ಜಿಲ್ಲೆಗಳ ರಕ್ಷಣಾಧಿಕಾರಿಯಾಗಿ,ಬೆಂಗಳೂರು ನಾರ್ಥ್ ಡಿಸಿಪಿ ಹಾಗೂ ಬೆಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕರಾಗಿ ಇದಕ್ಕೂ ಮುನ್ನ ಸೇವೆ ಸಲ್ಲಿಸಿದ್ದಾರೆ. ಮೀನಾ ಅವರ ವ ರ್ಗಾವಣೆಯಿಂದ ತೆರವಾಗಿರುವ ಹುದ್ದೆಗೆ ರಾಜ್ಯಸರ್ಕಾರ ಸದ್ಯಕ್ಕಿನ್ನೂ ಯಾರನ್ನು ನೇಮಿಸಿಲ್ಲ.