ಜಿಲ್ಲೆ

ಸೆಂಟ್ರಲ್​ ಜೈಲಿನಲ್ಲಿ ಹಕ್ಕಿಗಳಿಗಾಗಿ ಅರವಟಿಕೆ ಅಳವಡಿಕೆ

ಜಯತೀರ್ಥ ಪಾಟೀಲ

ಕಲಬುರಗಿ: ಕೇಂದ್ರ ಕಾರಾಗೃಹದ ಒಳ ಮತ್ತು ಹೊರ ಆವರಣದಲ್ಲಿ ಪಗಳ ನೀರಿನ ದಾಹ ನೀಗಿಸುವುದಕ್ಕಾಗಿ ಅರವಟಿಕೆ ಅಳವಡಿಸುವ ಕರ‍್ಯ ಸೋಮವಾರ ನಡೆಯಿತು. ಕಾರಾಗೃಹದ ಮುಖ್ಯಸ್ಥೆ ಡಾ.ಅನಿತಾ ಆರ್​. ಕರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಾನವನ ಸುಂದರ ಬದುಕಿಗೆ ಸ್ಫರ‍್ತಿದಾಯಕ ವಾತಾವರಣ ಪಶು&ಪಗಳಿಂದ ಸಿಗಲಿದ್ದು, ಮೂಕ ಜೀವಿಗಳ ಬದುಕಿಗೆ ಆಹಾರ& ನೀರು ಅವಶ್ಯಕವಾಗಿದೆ. ಅವುಗಳ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ರ‍್ತವ್ಯ ಎಂದರು. ಸುಮಾರು ೧೦೦ ಅರವಟಿಕೆಗಳನ್ನು ಗಿಡಗಳಿಗೆ ಕಟ್ಟಿ ನೀರುಣಿಸುವ ವ್ಯವಸ್ಥೆ ಮಾಡಲಾಗಿದೆ. ಕಚೇರಿ ಅಧೀಕ್ಷಕ ಎಂ.ಎಚ್​. ಆಶೇಖಾನ್​, ಜೈಲರ್​ಗಳಾದ ಸಾಗರ ಪಾಟೀಲ್​, ಶ್ರೀಮಂತ ಪಾಟೀಲ್​, ಶಾಮ ಬಿದರಿ, ಶಿಕ್ಷಕರಾದ ನಾಗರಾಜ ಮುಲಗೆ ಇತರರಿದ್ದರು.