ವಿಜಯಪುರ : ಇಲ್ಲಿನ ವಜ್ರಹನುಮಾನ ನಗರದ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮೇಲಾಟಗಳ ಸ್ಪರ್ಧೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ.
ಜಿಪಂ ಉಪನಿರ್ದೇಶಕರ ಕಚೇರಿ ಮತ್ತು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 2024&25 ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿ ಕೆಜಿಎಫ್ ಕೋಲಾರ ಹಾಗೂ ಶಿವಮೊಗ್ಗದಲ್ಲಿ ಜರುಗಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ವಿಭಾಗದ 4*100 ಮೀ. ರೀಲೆಯಲ್ಲಿ ತನಿಶ್ ರಾಥೋಡ, ಸುಫಿಯಾನ ಖಾಜಿ, ಸುಜಲ ಮಮದಾಪೂರ, ಶ್ರೇಯಸ್ ದೇಶಪಾಂಡೆ ವಿದ್ಯಾರ್ಥಿಗಳಿದ್ದ ತಂಡವು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರೌಢ ವಿಭಾಗದ 4*100 ಮೀ. ರೀಲೆಯಲ್ಲಿ ಶ್ರೇಯಸ್ ತೇಲಿ, ಅಯಾನ ಹತ್ತರಕಿಹಾಳ, ಅಮಾನ್ ಇಮಾರತವಾಲೆ ಮತ್ತು ಅಜೀತ ಚಹಾಣ ವಿದ್ಯಾರ್ಥಿಗಳ ತಂಡವು ಜಿಲ್ಲಾ ಮಟ್ಟದ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಮುಖ್ಯಸ್ಥೆ ಅನಲೀಸಾ ಬಾಸ್ಕೋ, ಅಧ್ಯಕ್ಷ ಶಾಜು ಜೋಸೆಫ್, ದೈಹಿಕ ಶಿಕ್ಷಣ ಶಿಕ್ಷಕ ವಿಜಯಕುಮಾರ ಹಳ್ಳದಮನಿ, ಲೋಕೇಶ ಕಾಂಬಳೆ, ಅನಿಲ ತೊರವಿ, ಪ್ರೀತಿ ಕಾಳೆ, ಸವಿತಾ ಕೋಳಿ, ಆನಂದ ಬಿರಾದಾರ, ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.