ಬಾಗಲಕೋಟೆ ನಗರದ ತೋವಿವಿಯಲ್ಲಿ ಶುಕ್ರವಾರ ತೋವಿವಿ ಕುಲಪತಿ ಡಾ. ವಿಷ್ಣುರ್ಧನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 
ಜಿಲ್ಲೆ

ಸೆ.೩೦ ರಂದು ತೋವಿವಿ ೧೩ನೇ ಘಟಿಕೋತ್ಸವ

ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ೧೩ನೇ ಘಟಿಕೋತ್ಸವವನ್ನು ಸೆ.೩೦ ರಂದು ಬೆಳಗ್ಗ ೧೧ ಗಂಟೆಗೆ ಬಾಗಲಕೋಟೆ ತೋವಿವಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತೋವಿವಿ ಕುಲಪತಿ ಡಾ. ವಿಷ್ಣುರ್ಧನ ಹೇಳಿದರು.

ನಗರದ ತೋವಿವಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲ ಥಾವರಚಂದ ಗೆಹ್ಲೋಟ ಅಧ್ಯಕ್ಷತೆ ವಹಿಸಲಿದ್ದಾರೆ. ತೋಟಗಾರಿಕಾ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಉದ್ಘಾಟಿಸಲಿದ್ದಾರೆ. ಕೇಂದ್ರ ಸರ್ಕಾರದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆ ಕಾರ್ಯದರ್ಶಿ ಡಾ. ಎನ್ ಕಲ್ವÊೆಸೆಲ್ವಿ ಮುಖ್ಯ ಅತಿಥಿಗಳಾಗಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.

ಈ ಘಟಿಕೋತ್ಸವವದಲ್ಲಿ ಬಿ.ಎಸ್ಸ್ಸಿ (ಹಾರ‍್ಸ್) ತೋಟಗಾರಿಕೆ ಮತ್ತು ಬಿಟೆಕ್ (ಆಹಾರ ತಂತ್ರಜ್ಞಾನ) ೫೭೭ ವಿದ್ಯಾರ್ಥಿಗಳು, ಎಂ.ಎಸ್ಸ್ಸಿ (ತೋಟಗಾರಿಕೆ) ಸ್ನಾತಕೋತ್ತರ ಪದವಿಯಲ್ಲಿ ಬರುವ ೧೦ ವಿಭಾಗಗಳಲ್ಲಿ ಉತ್ತಿರ್ಣರಾದ ೧೦೧ ಪದವಿ ವಿದ್ಯಾರ್ಥಿಗಳಿಗೆ ಹಾಗೂ ಪಿ ಎಚ್‌ಡಿ ಕಾರ್ಯಕ್ರಮದಲ್ಲಿ ಬರುವ ೧೦ ವಿಭಾಗಗಳ ೪೪ ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದ್ದು, ರಾಜ್ಯದಲ್ಲಿರುವ ಎಲ್ಲಾ ತೋಟಗಾರಿಕೆ ಮಹಾವಿದ್ಯಾಲಯಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ಅರ್ಹ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಮತ್ತು ದಾನಿಗಳ ಚಿನ್ನದ ಪದಕಗಳನ್ನು ನೀಡಲಾಗುವುದು. ಸ್ನಾತಕೋತ್ತರ ಪದವಿಯಲ್ಲಿ ಆಯಾ ವಿಷಯಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ೨೩ ಹಾಗೂ ದಾನಿಗಳ ೫೭ ಸೇರಿ ಒಟ್ಟು ೮೦ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು ಎಂದು ಹೇಳಿದರು.

೨೦೨೪-೨೫ ನೇ ಶೈಕ್ಷಣಿಕ ಸಾಲಿನಿಂದ ಹೊಸದಾಗಿ ತೋಟಗಾರಿಕೆ ಮಹಾವಿದ್ಯಾಲಯವು ಅಲಮೇಲದಲ್ಲಿ ಸ್ಥಾಪನೆಗೊಂಡಿರುತ್ತದೆ. ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಪ್ರಸ್ತುತ ೩೦೬ ಶಿಕ್ಷಕರು ಹಾಗೂ ೪೫೦ ಬೋಧಕೇತರ ಸಿಬ್ಬಂದಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತೋವಿವಿ ಶಿಕ್ಷಣ ನಿರ್ದೇಶಕ ಎನ್.ಕೆ.ಹೆಗಡೆ, ಸಂಶೋಧನಾ ನಿರ್ದೇಶಕ ಡಾ. ಫಕ್ರುದ್ಧಿನ್, ವಿಸ್ತರಣಾ ನಿರ್ದೇಶಕ ಟಿ.ಬಿ.ಅಳ್ಳೊಳ್ಳಿ ಹಾಗೂ ರಜಿಸ್ಟರ ಮಹಾದೇವ ಮುರಗಿ ಸೇರಿದಂತೆ ಇತರರು ಇದ್ದರು.