ಪ್ರಸನ್ನ ವೆಂಕಟದಾಸರು 
ಜಿಲ್ಲೆ

ಸೆ.6 ರಂದು ಹರಿದಾಸ ಸಾಹಿತ್ಯ ಸಮ್ಮೇಳನ

ಬಾಗಲಕೋಟೆ: ಪ್ರಸನ್ನವೆಂಕಟದಾಸರ ಆರಾಧನೆ ಸೆ.6ರಂದು ಜರುಗಲಿದ್ದು, ಇದೇ ಕಾಲಕ್ಕೆ 12ನೇ ಹರಿದಾಸ ಸಾಹಿತ್ಯ ಸಮ್ಮೇಳನ, ಪ್ರಸನ್ನವೆಂಕಟದಾಸರ ಸಾಹಿತ್ಯದ ಚಿಂತನ ಮಂಥನ ಕಾರ್ಯಕ್ರಮ ನಡೆಯಲಿದೆ. ಚಿಂತಕ, ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಪ್ರಸನ್ನವೆಂಕಟದಾಸರ ಸ್ಮಾರಕ ಭವನ ಭೂಮಿ ಪೂಜೆ, ಧ್ವನಿ ಸುರಳಿ ಬಿಡುಗಡೆ ನಡೆಯಲಿದೆ. ಸಂಶೋಧಕ ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ ಅವರಿಗೆ ಶ್ರೀಪ್ರಸನ್ನವೆಂಕಟ ಸಾಹಿತ್ಯ ರತ್ನ, ಶ್ರೀದತ್ತಾತ್ರೇಯರಾವ್ ಅವರಿಗೆ ಪ್ರಸನ್ನವೆಂಕಟದಾಸ ಸಾಹಿತ್ಯ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಸೆ.6 ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಹರಿದಾಸ ಸಾಹಿತ್ಯ ಸಮ್ಮೇಳನವನ್ನು ಶಾಸಕ ಡಾ.ವೀರಣ್ಣ ಚರಂತಿಮಠ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಖ್ಯಾತ ಸಂಶೋಧಕ ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ, ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಮಾರಂಭದಲ್ಲಿ ಡಾ.ರಘೋತ್ತಮಾಚಾರ್ಯ ನಾಗಸಂಪಗಿ, ಬಿಂದುಮಾಧವಾಚಾರ್ಯ ನಾಗಸಂಪಗಿ, ಪಂ.ಭೀಮಸೇನಾಚಾರ್ಯ ಪಾಂಡುರಂಗಿ, ರಂಗವಿಠ್ಠಲ ಮಾಸ ಪತ್ರಿಕೆಯ ಸಂಪಾದಕ ಎಚ್.ಬಿ.ಲಕ್ಷ್ಮೀ ನಾರಾಯಣಾಚಾರ್ಯ, ರಾಯಚೂರಿನ ಸಂಶೋಧಕಿ ಡಾ.ಜಯಲಕ್ಷ್ಮೀ ಮಂಗಳಮೂರ್ತಿ, ಡಾ.ಶೀಲಾ ದಾಸ, ಆಧ್ಯಾತ್ಮಕ ಚಿಂತಕಿ ಸಿಂಗಾಪುರದ ಪರಿಮಳಾ ರಾಘವೇಂದ್ರನ್, ನಿವೃತ್ತ ಪ್ರಾಚಾರ್ಯ ಡಾ.ಆರ್.ಎನ್.ಹೆರಕಲ್, ಎಂ.ದತ್ತಾತ್ರೇಯರಾವ್, ಡಾ.ಮಧಸೂಧನ ಹವಾಲ್ದಾರ, ವಿದ್ವಾನ ಅನಂತ ಕುಲಕರ್ಣಿ, ಡಾ.ರೇಖಾ ಕಾಖಂಡಕಿ, ಡಾ.ಸುಭಾಸ ಕಾಖಂಡಕಿ ಉಪನ್ಯಾಸ ನೀಡಿದ್ದಾರೆ.

ಸೆ.7ರಂದು ವೇ.ಮೂ.ದೃವಾಚಾರ್ಯ ಕಾಖಂಡಕಿ, ಡಾ.ವೀರಣ್ಣ ಚರಂತಿಮಠ, ವಿಧಾನಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಪಂ.ಡಾ.ರಘೋತ್ತಮಾಚಾರ್ಯ ನಾಗಸಂಪಗಿ, ಪಂ.ಭೀಮಸೇನಾಚಾರ್ಯ ಪಾಂಡುರಂಗಿ, ಖ್ಯಾತ ಚಲನಚಿತ್ರ ನಿರ್ದೇಶಕಿ ನಿರ್ಮಾಪಕಿ ಮಧಸೂಧನ ಹವಾಲ್ದಾರ, ಡಾ.ಸುಭಾಸ ಕಾಖಂಡಕಿ, ಡಾ.ರೇಖಾ ಕಾಖಂಡಕಿ, ಪಂ.ಅನಂತ ಕುಲಕರ್ಣಿ ಅವರ ಪ್ರಸನ್ನವೆಂಕಟದಾಸರ ಚಲನಚಿತ್ರದ ಧ್ವನಿಸುರಳಿ ಬಿಡುಗಡೆ ಮಾಡಲಿದ್ದಾರೆ.

ಬಾಕ್ಸ್..ಸೆ.5ರಂದು ಬೆಳಗ್ಗೆ 11 ಗಂಟೆಗೆ ನವನಗರದ ಸೆಕ್ಟರ್ 3 ರಲ್ಲಿ ಪ್ರಸನ್ನವೆಂಕಟ ಸ್ಮಾರಕ ಭವನಕ್ಕೆ ಶಾಸಕ ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಸಲಿದ್ದಾರೆ. ವೇ.ಮೂ ದೃವಾಚಾರ್ಯ ಕಾಖಂಡಕಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಪಂ.ರಘೋತ್ತಮಾಚಾರ್ಯ ನಾಗಸಂಪಗಿ, ಖ್ಯಾತ ನ್ಯಾಯವಾದಿ ಕೆ.ಎಸ್.ದೇಶಪಾಂಡೆ, ಪಂ.ಬಿಂದುಮಾಧವಾಚಾರ್ಯ ನಾಗಸಂಪಗಿ, ಪಂ.ಭೀಮಸೇನಾಚಾರ್ಯ ಪಾಂಡುರಂಗಿ, ನಗರಸಭೆ ಸದಸ್ಯ ಚನ್ನವೀರಯ್ಯ ಹಿರೇಮಠ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶ್ರೀಪ್ರಸನ್ನವೆಂಕಟ ಕಲ್ಚರಲ್ ಹಾಗೂ ಚಾರಿಟೇಬಲ್ ಟ್ರಸ್ಟ ಅಧ್ಯಕ್ಷ ಡಾ.ಸುಭಾಸ ಕಾಖಂಡಕಿ, ಖ್ಯಾತ ಗಾಯಕ ಅನಂತ ಕುಲಕರ್ಣಿ, ಪತ್ರಕರ್ತ ರಾಮ ಮನಗೂಳಿ ಉಪಸ್ಥಿತರಿರುವರು.