ಜಿಲ್ಲೆ

ಸೆ.15,16ರಂದು ಚಿತ್ರಕಲಾ ಸ್ಪರ್ಧೆ-ಪ್ರದರ್ಶನ

ಹಾಸನ: ಶಾಂತಲಾ ಲಲಿತ ಕಲಾ ಶಾಲೆ ವತಿಯಿಂದ ನಗರದ ಸಂಸ್ಕೃತ ಭವನದಲ್ಲಿ ಸೆ.15 ಹಾಗು 16ರಂದು ಶಾಂತಲಾ ಗ್ರೂಪ್ ಶೋ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರಕಲಾವಿದ ಶಿವಕುಮಾರ್ ಅವರು ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರಕಲಾ ಸ್ಪರ್ಧೆ ಹಾಗು ಪ್ರದರ್ಶನ ಕಾರ್ಯಕ್ರಮವನ್ನು ಸೆ. 15ರಂದು ಬೆಳಿಗ್ಗೆ 9 ಗಂಟೆಗೆ ಅಂತಾರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್ ಉದ್ಘಾಟಿಸುವರು. ನಗರಸಭೆ ಅಧ್ಯಕ್ಷ ಚಂದ್ರೇಗೌಡ, ಸಾಹಿತಿ ಗೊರೂರು ಅನಂತರಾಜು, ಕರ್ನಾಟಕ ಲಲಿತ ಕಲ ಅಕಾಡೆಮಿ ಸದಸ್ಯ ಹೆಚ್.ಎಸ್ ಮಂಜುನಾಥ್, ಹಿರಿಯ ಚಿತ್ರಕಲಾ ಶಿಕ್ಷಕರಾದ ಅಮೃತಚಾರಿ, ನಿರ್ಮಲ ಕಲಾ ಶಾಲೆಯ ನಿವೃತ್ತ ಪ್ರಾಂಶುಪಾಲ ಕಾರದಕಟ್ಟಿ, ಲೇಖಕಿ ಸುವರ್ಣ ಶಿವಪ್ರಸಾದ್ , ಸಾಹಿತ್ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಲೇಖಕಿ ಸುವರ್ಣ ಕೆ.ಟಿ.ಶಿವಪ್ರಸಾದ್ ಮಾತನಾಡಿ, ಎರಡು ದಿನಗಳ ಕಾರ್ಯಕ್ರಮದಲ್ಲಿ 500 ಮಕ್ಕಳು ಭಾಗಿಯಾಗುವ ನಿರೀಕ್ಷೆ ಇದೆ. ಮಕ್ಕಳಿಗೆ ತರಗತಿವಾರು ಬಹುಮಾನ ನೀಡಲಾಗುವುದು. ಇದೇ ಮೊದಲ ಬಾರಿಗೆ ಈ ಸ್ಪರ್ಧೆ ಏರ್ಪಡಿಸಲಾಗಿದೆ. ಚಿತ್ರಕಲೆ ಉಳಿಸಲು ಈ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಹಿರಿಯ ಅಂತಾರಾಷ್ಟ್ರೀಯ ಕಲಾವಿದರಾದ ಕೆ.ಟಿ.ಶಿವಪ್ರಸಾದ್, ಕಲಾ ಶಿಕ್ಷಕರಾದ ಬಸವರಾಜ್,ಯೋಗಾನಂದ್, ಲತಾ ಇದ್ದರು.