ಮೈಸೂರು: ಅಭಿನಯ ಸರಸ್ವತಿ ದಿವಂಗತ ಬಿ.ಸರೋಜಾದೇವಿ ಅವರ ನೆನಪಿನಲ್ಲಿ ಆಯೋಜಿಸಿರುವ ದಸರಾ ಚಲನಚಿತ್ರೋತ್ಸವಕ್ಕೆ ಸೆ.13ರಂದು ಬೆಳಗ್ಗೆ 11ಗಂಟೆಗೆ ಮಾಲ್ ಆಫ್ ಮೈಸೂರಿನ ನೆಲಮಹಡಿಯಲ್ಲಿ ಚಾಲನೆ ದೊರೆಯಲಿದೆ.
ಕಲಾವಿದರಾದ ಸಂಧ್ಯಾ ಅರಕೆರೆ, ಪೃಥ್ವಿ ಅಂಬರ್, ಜಸ್ಕರನ್ ಸಿಂಗ್, ನಾಗಾರ್ಜುನ್ ಶರ್ಮಾ, ಅಂಜಲಿ ಭಾಗವಹಿಸಲಿದ್ದಾರೆ.
ಚಲನಚಿತ್ರ ಪ್ರದರ್ಶನವು ಮಾಲ್ ಆಫ್ ಮೈಸೂರಿನ ಐನಾಕ್ಸ್‌ನಲ್ಲಿ ಸೆ.14 ರಿಂದ 20 ರ ವರೆಗೆ ನಡೆಯಲಿದ್ದು, ಚಲನಚಿತ್ರ ಪ್ರದರ್ಶನ ಪಾಸ್ ನೋಂದಣಿಗೆ ವಿದ್ಯಾರ್ಥಿಗಳಿಗೆ 300 ರೂ., ಇತರ 500 ರೂ. ನಿಗದಿಪಡಿಸಲಾಗಿದೆ.
ಚಲನಚಿತ್ರರಂಗದ ಹಿರಿಯ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ್‌ನಾರಾಯಣ್ ನೇತೃತ್ವದಲ್ಲಿ ಅಪರೂಪದ ಸಿನಿ ಫೋಟೋ ಪ್ರದರ್ಶನವನ್ನು ಸೆ.14 ರಿಂದ 18 ರ ವರೆಗೆ ಐನಾಕ್ಸ್ ಮಾಲ್‌ನಲ್ಲಿ ಆಯೋಜಿಸಲಾಗಿದೆ.