ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸಂತತ ಟ್ರಸ್ಟ್ ಹಾಗೂ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ಉದಯ ದೇಸಾಯಿ ಅವರ ಸಹಕಾರದೊಂದಿಗೆ ಜು. 20ರಂದು ಸಂಜೆ 6.45ಕ್ಕೆ ನಗರದ ಸೃಜನಾ ರಂಗಮ0ದಿರದಲ್ಲಿ ಡಾ. ಯಶವಂತ ಸರದೇಶಪಾಂಡೆ ಅವರು 60 ವರ್ಷ ಪೂರೈಸಿದ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇವೇಳೆ ಡಾ. ಸರದೇಶಪಾಂಡೆ ಅವರ ಸಾವಿರಾರು ಪ್ರದರ್ಶನ ಕಂಡ ಜನಪ್ರಿಯ ಏಕವ್ಯಕ್ತಿ ರಂಗಪ್ರಯೋಗ `ರಾಶಿಚಕ್ರ' ಪ್ರಯೋಗಗೊಳ್ಳಲಿದೆ.