ಜಿಲ್ಲೆ

ಸೃಜನ ಶೀಲ ಚಟುವಟಿಕೆಗಳಿಗೆ ಭಿತ್ತಿಪತ್ರಿಕೆ ಸಹಕಾರಿ

ಚಿತ್ರದುರ್ಗ: ನಗರದ ಎಸ್‌ಆರ್‌ಎಸ್ ಪಿಯು ಕಾಲೇಜಿನಲ್ಲಿ ಗುರುವಾರ ‘ಕಲಾವರ್ಣ’ಭಿತ್ತಿಪತ್ರಿಕೆ ಯನ್ನು ಕಾಲೇಜಿನ ಪ್ರಾಂಶು ಪಾಲ,ಪತ್ರಿಕೆ ಗೌರವ ಸಂಪಾದಕ ಇ.ಗಂಗಾಧರ್ ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಅವರು,ಪಠ್ಯಕ್ಕೆ ಸೀಮಿತಗೊಳ್ಳದೆ,ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕಿದೆ.
ಈ ಹಿನ್ನೆಲೆಯಲ್ಲಿ ಕಲಾವರ್ಣವನ್ನು ಪ್ರಾರಂಭಿಸ ಲಾಗಿದೆ.ಕಥೆ ,ಕವನ, ಚಿತ್ರಕಲೆ,ಸಾಮಾನ್ಯಜ್ಞಾನ ಸೇರಿ ನಾನಾ ಸೃಜನಶೀಲ ಬರಹಗಳಿಗೆ ವಿದ್ಯಾ ರ್ಥಿಗಳನ್ನು ಪ್ರೋತ್ಸಾಹಿಸಲು ಈ ಪತ್ರಿಕೆ ಉತ್ತಮ ವೇದಿಕೆಯಾಗಲಿದೆ ಎಂದರು.
ಪತ್ರಿಕೆ ಪ್ರಧಾನ ಸಂಪಾದಕ ಎಚ್.ಅಣ್ಣಪ್ಪ,ಸಂಪಾದಕ ಧನಂಜಯ, ಎಂ.ವಿ.ನಟರಾಜ,ಪ್ರದೀಪ್ ಕುಮಾರ್, ಡಾ.ಮಹಾಂತೇಶ್, ಗುರುರಾಜ, ನೀಲುಫರ್‌ಪಾಟೀಲ್,ಶ್ರೀನಿಧಿ,ಶ್ರೇಯಸ್,ಛಾಯಾ ಮತ್ತಿತರರು ಇದ್ದರು.