ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದ ಐತಿಹಾಸಿಕ ಪುರಾತನ ಶ್ರೀರಾಮ ಮಂದಿರದಲ್ಲಿ ಗುರುವಾರ ದೀಪ ಬೆಳಗಿಸಿ ಅಲಂಕರಿಸಲಾಯಿತು. 
ಜಿಲ್ಲೆ

ಸೂಳಿಕೇರಿ ರಾಮದೇವರಿಗೆ ವಿಶೇಷ ಪೂಜೆ

ಬಾಗಲಕೋಟೆ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಸ್ಥಾಪನೆಯಾಗಿ ಒಂದು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮದ ಐತಿಹಾಸಿಕ ಪುರಾತನ ಶ್ರೀರಾಮ ಮಂದಿರದಲ್ಲಿ ಗುರುವಾರ ವಿಶೇಷ ಪೂಜೆ ಜರುಗಿತು.

ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಶ್ರೀರಾಮ ದೇವರಿಗೆ ಪಂಚಾಮೃತ ವಿಶೇಷ ಅಲಂಕಾರ ಪೂಜೆ ನೆರವೇರಿದವು. ಸಂಜೆ ಭಜನೆ ಕಾರ್ಯಕ್ರಮ ಮಹಾಮಂಗಳಾರತಿ ಸಂಗೀತ ಕಾರ್ಯಕ್ರಮದಲ್ಲಿ ನೂರಾರು ಜನ ಭಾಗವಹಿಸಿದ್ದರು. ಡಾ.ಜಯತೀರ್ಥ ದೇಶಪಾಂಡೆ, ಜಿ.ಎನ್. ಸೂಳಿಕೆರಿ, ಭಿಮಣ್ಣ ಕುಲಕರ್ಣಿ, ವಿಜಯ ದೇಶಪಾಂಡೆ, ನಿಖಿಲ್ ದೇಶಪಾಂಡೆ, ಸಂಜೀವ ದೇಶಪಾಂಡೆ, ಸಾಗರ ದೇಶಪಾಂಡೆ, ಮೋಹನ ದೇಶಪಾಂಡೆ ಇತರರು ಇದ್ದರು.