ಜಿಲ್ಲೆ

ಸೂಪರ್ ಮಾರುಕಟ್ಟೆ ಸೇವೆ ಶೀಘ್ರ ಲಭ್ಯವಾಗಲಿ

ಬಾಗಲಕೋಟೆ: ಪ್ರತಿ ತಾಲೂಕಿನಲ್ಲಿ ಮಾರುಕಟ್ಟೆ ಇರುವಂತಹ ಸ್ಥಳದಲ್ಲಿ ಸುಜಜ್ಜಿತವಾದ ಕಟ್ಟಡವನ್ನು ಗುರುತಿಸುವ ಮೂಲಕ ಸೂಪರ್ ಮಾರುಕಟ್ಟೆ ಸೇವೆ ಲಬ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿದರ್ ಕುರೇರ್ ಸೂಚಿಸಿದರು.

ಜಿಲ್ಲಾ ಪಂಚಾಯತ್ ಹಳೆಯ ಸಭಾಂಗಣದಲ್ಲಿ ಎನ್ ಆರ್ ಎಲ್ ಎಮ್ ಯೋಜನೆಯಡಿ ಸೌಲಭ್ಯ ಪಡೆದುಕೊಂಡ ಮಹಿಳಾ ಸ್ವ-ಸಹಾಯ ಸಂಘಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರತಿ ತಾಲೂಕಿಗೊಂದರಂತೆ ಸೂಪರ್ ಮಾರುಕಟ್ಟೆ, ಮೊಬೈಲ್ ಕ್ಯಾಂಟಿನ್ ಮತ್ತು ಅಕ್ಕ ಕೆ¥ ಪ್ರಾರಂಬಿಸುವ ಗುರಿ ಹೊಂದಲಾಗಿದ್ದು ಈ ನಿಟ್ಟಿನಲ್ಲಿ ಜಿಲ್ಲೆಯ ಮಹಿಳಾ ಸ್ವ-¸ಹಾಯ ಸಂಘಗಳು ಒಂದು ವಾರದೊಳಗೆ 3 ಪ್ರಸ್ತಾವನೆಗಳನ್ನು ಸಲ್ಲಿಸಿದಲ್ಲಿ ಸ್ಥಳ ಮತ್ತು ಕಟ್ಟಡವನ್ನು ಪರಿಶೀಲಿಸಿ ಅನುಮತಿ ನೀಡಲಾಗುವುದು. ಇದಕ್ಕಾಗಿ ಈಗಾಗಲೇ ಸಾಕಷ್ಟು ಪ್ರಚಾರವನ್ನು ನೀಡಲಾಗಿದೆ. ಜೂನ ಮಾಹೆಯ ಅಂತ್ಯದೊಳಗೆ ಎಲ್ಲ ತಾಲೂಕುಗಳಲ್ಲಿ ಸೂಪರ್ ಮಾರುಕಟ್ಟೆ, ಕ್ಯಾಂಟಿನ್ ಪ್ರಾರಂಬಿಸುವ ಮೂಲಕ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದರು.

ಕಳೆದ ವಾರದಲ್ಲಿ 177 ಜನ ಎಸ್ ಹೆಚ್ ಜಿÀ ಮಹಿಳೆಯರಿಗೆ ವಾಹನ ಚಾಲನೆ ತರಬೇತಿ ನೀಡಲಾಗಿದ್ದು, ಎಲ್ಲರಿಗೂ ಡಿ ಎಲ್ ನೀಡುವ ವ್ಯವಸ್ಥೆಯಾಗಬೇಕು. ಮತ್ತು ತಕ್ಷಣ ಕಸ ಸಂಗ್ರಹ ವಿಲೇವಾರಿ ವಾಹನಗಳನ್ನು ನೀಡಿದಲ್ಲಿ ತರಬೇತಿಯ ಸದುಪಯೋಗವಾಗುತ್ತದೆ. ಬೇರೆ ಜಿಲ್ಲೆಗಳಲ್ಲಿ ಪ್ರತಿಶತ ಕಾರ್ಯರೂಪಕ್ಕೆ ಬಂದಿದ್ದು, ನಮ್ಮ ಜಿಲ್ಲೆಯಲ್ಲಿ ಅರ್ದದಷ್ಟು ಮಾತ್ರ ವಾಹನಗಳ ವಿತರಣೆಯಾಗಿರುತ್ತದೆ. ಇದಕ್ಕೆ ಸಂಬಂದಪಟ್ಟ ಪಂಚಾಯುತ್ ಅಭಿವೃದ್ಧಿ ಅಧಿಕಾರಿಗಳು ಗಮನ ಹರಿಸಿ ಕೆಲಸ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎನ್.ಆರ್.ಎಲ್.ಎಂ ಯೋಜನೆಯ ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕರಿಗೆ ಲ್ಯಾಪಟಾಪ್‍ಗಳನ್ನು ವಿತರಿಸಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಎನ್ ವಾಯ್ ಬಸರಿಗಿಡದ, ಸಹಾಯಕ ಯೋಜನಾ ನಿರ್ದೇಶಕ ಬೀಮಪ್ಪಾ ತಳವಾರ ಹಾಗೂ ವಿವಿಧ ಸ್ವ-ಸಹಾಯ ಸಂಘಗಳ ಪದಾಧಿಕಾರಿಗಳು ಇದ್ದರು.